Belagavi News In Kannada | News Belgaum

ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಮೇಲೆ ಕಲ್ಲು ತೂರಿ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.

ಬೆಳಗಾವಿ-ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಮೇಲೆ ಕಲ್ಲು ತೂರಿ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದ್ದು ಮಹಾರಾಷ್ಟ್ರದಲ್ಲಿ ಈ ವಿಚಾರದಲ್ಲಿ ಕಲ್ಲು ತೂರಿ ಗೂಂಡಾಗಿರಿ ಶುರುವಾಗಿದೆ.

ಮಿರಜ್ ಕಾಗವಾಡ‌ ಮಧ್ಯೆದ ಮಾರ್ಗದಲ್ಲಿ ಕರ್ನಾಟಕ ಬಸ್ ಗೆ ಕಲ್ಲು ತೂರಾಟ ನಡೆಸಿರುವ ಗೂಂಡಾಗಳು ಮತ್ತೆ ಪುಂಡಾಟಿಕೆ ನಡೆಸಿದ ದ್ದಾರೆ.

ಪುನೆಯಿಂದ ಅಥಣಿ ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್,ಕಳೆದ ರಾತ್ರಿ 10.30ರ ಸುಮಾರಿಗೆ ರನ್ನಿಂಗ್ ಅಲ್ಲಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ
ಬಸ್ಸಿನ ಮುಂಭಾಗದ ಗಾಜು ಜಖಂಗೊಂಡಿದೆ
ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ ಬಸ್ ಇದಾಗಿದೆ.ಕರ್ನಾಟಕ ಬಸಗಳಿಗೆ ಕಲ್ಲು ತೂರಾಟ ಹಿನ್ನೆಲೆ ಬಸ್ ಕಾರ್ಯಾಚರಣೆ ಸ್ಥಗಿತವಾಗಿದೆ‌
ಕಾಗವಾಡ-ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತಗೊಂಡಿದೆ