Belagavi News In Kannada | News Belgaum

ಮಹಾರಾಷ್ಟ್ರ ನೆಲದಲ್ಲಿ ಹಾರಿದ ಕನ್ನಡ ಧ್ವಜ: ಪುಂಡರ ವಿರುದ್ಧ ತೊಡೆ ತಟ್ಟಿದ ಮಾರಾಠಿ ಕನ್ನಡಿಗರು

ಬೆಳಗಾವಿ: ಗಡಿ ವಿವಾದದ ಬೆನ್ನಲ್ಲೆ ಮಹಾರಾಷ್ಟ್ರ ರಾಜ್ಯದ ಗ್ರಾಮವೊಂದರಲ್ಲಿ ಕನ್ನಡ ಧ್ವಜ ರಾರಾಜಿಸಿದೆ. ಸ್ವತಃ ಗ್ರಾಮಸ್ಥರೇ ಊರ ಹೆಬ್ಬಾಗಿಲಿಗೆ ಕನ್ನಡ ಬಾವುಟ ಕಟ್ಟುವ ಮಾರಾಠಿ ಪುಂಡರ ವಿರುದ್ದ ಹರಿಹಾಯ್ದಿದ್ದಾರೆ. ಅಲ್ಲದೆ, ಸಿಎಂ  ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಮಹಾರಾಷ್ಟ್ರ ಸಿಎಂಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೌದು.. ಹೀಗೊಂದು ರೋಚಕ ಘಟನೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ್ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಮುಖ್ಯ ದ್ವಾರಕ್ಕೆ ಕನ್ನಡ ಬಾವುಟ ಕಟ್ಟಿ ಗ್ರಾಮಸ್ಥರು ಕನ್ನಡಾಭಿಮಾನ ಮೆರೆದಿದ್ದಾರೆ. ಅಲ್ಲದೆ, ಬೈಕುಗಳಿಗೆ ಕನ್ನಡ ಬಾವುಟ ಕಟ್ಟಿ ಜೈ ಕರ್ನಾಟಕ ಎಂದು ಜೈಯ ಘೋಷ ಕೂಗಿದ್ದಾರೆ ಮರಾಠಿ ಕನ್ನಡಿಗರು. ಅಲ್ಲದೆ, ಮಹಾರಾಷ್ಟ್ರ ಸರ್ಕಾರಕ್ಕೆ ಮರಾಠಿ ಕನ್ನಡಿಗರು ಮೊದಲು ಅಭಿವೃದ್ದಿ ಕಡೆಗೆ ಗಮನ ಹರಿಸುವಂತೆ ಪಾಠ ಮಾಡಿದ್ದಾರೆ.
ಇನ್ನು ತಿಕ್ಕುಂಡಿ ಗ್ರಾಮಸ್ಥರು ಮಹಾ ಸರ್ಕಾರಕ್ಕೆ ಮೂಲಭೂತ ಸೌಕರ್ಯ ಕೊಡಿ ಎಂದು ಒತ್ತಾಯಿಸಿದ್ದಾರೆ. ಮುಖ್ಯವಾಗಿ ನೀರಾವರಿ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಕೊಡದಿದ್ದರೆ ತಾವು ಕರ್ನಾಟಕಕ್ಕೆ ಸೇರಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕರ್ನಾಟಕಕ್ಕೆ ಸೇರುವ ಉತ್ಸುಕತೆ ಜನರಲ್ಲಿ ಹೆಚ್ಚುತ್ತಿದೆ. ಮಾರಾಠಿ ಪುಂಡರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಪ್ರತ್ಯುತ್ತರವನ್ನು ಮಹಾ ಕನ್ನಡಿಗರು ನೀಡುತ್ತಿದ್ದಾರೆ. ಇನ್ನು ಮಾರಾಠಿ ಕನ್ನಡಿಗರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ, ನಮ್ಮ ಬಗ್ಗೆ ಕರ್ನಾಟಕ ಸಿಎಂಗೆ ಕಾಳಜಿ ಇದೆ ಎಂದು ಆತ್ಮ ವಿಶ್ವಾಸ ವಕ್ತಪಡಿಸಿದ್ದಾರೆ. ಇನ್ನು ಪದೇ ಪದೇ ಗಡಿವಿವಾದ ಕೆದಕುವ ಮಾರಾಠಿ ಪುಂಡರಿಗೆ ಇದು ಒಂದು ಪಾಠವಾದಂತಾಗಿದೆ./////