Belagavi News In Kannada | News Belgaum

ವಿ.ತಾ.ವಿ ವಯಿಂದ ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪ್ರಸಾರಾಂಗ ವಿಭಾಗದಿಂದ ಸನ್ 2022-23 ನೇ ಸಾಲಿನ 67 ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲೆಯ 05 ಜನ ಮಹನೀಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಗುರುವಾರ (ನ.24) ವಿತಾವಿಯ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಪ್ರೇಕ್ಷಾಗರಹದಲ್ಲಿ ಆಯೋಜಿಸಲಾಗಿತ್ತು.
ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಶ್ರೀ ಹಣಮಂತ ಬಾ. ಹುಕ್ಕೇರಿ ಇವರಿಗೆ ಶಿಲ್ಪಕಲಾ ವಿಭಾಗದಲ್ಲಿ, ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಅಶೋಕಬಾಬು ನೀಲಗಾರ ಹಾಗೂ ಬೆಳಗಾವಿಯ ಶಂಕರ. ಬುಚಡಿ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ರಾಘವೇಂದ್ರ ಅಣ್ವೇಕರ ಇವರಿಗೆ ಕ್ರೀಡಾ ವಿಭಾಗದಲ್ಲಿ ಹಾಗೂ ಅರವಿಂದ ಪಾಟೀಲ್ ಇವರಿಗೆ ಹೊರನಾಡು ವಿಭಾಗದಲ್ಲಿ ಕರ್ನಾಟಕ ಸರ್ಕಾರವು ನವೆಂಬರ್ 1 ನೇ ತಾರೀಖಿನಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸದರಿ ಬೆಳಗಾವಿ ಜಿಲ್ಲೆಯವರಾದ ಈ ಐವರನ್ನು ವಿಶ್ವವಿದ್ಯಾಲಯದಲ್ಲಿ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರು ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಬಿ.ಈ. ರಂಗಸ್ವಾಮಿ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿ ಸದರಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿದ್ಯಾಶಂಕರ ಎಸ್ ಅವರು ಪ್ರಶಸ್ತಿ ಪುರಸ್ಕøತರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಿ ತಮ್ಮ ಅಧ್ಯಕ್ಷಿಯ ಮಾತುಗಳನ್ನು ಆಡುತ್ತ ಸದರಿ ಪ್ರಶಸ್ತಿ ಪಡೆದಿರುವ ಎಲ್ಲರು ಅವರವರ ವಿಭಾಗದಲ್ಲಿ ಬಹಳಷ್ಟು ಶ್ರಮವಹಿಸಿ ಸಾಧನೆಗೈದವರಾಗಿದ್ದಾರೆ. ಇಂದು ಕರ್ನಾಟಕ ಹಾಗೂ ಕರ್ನಾಟಕದಲ್ಲಿನ ಬೆಂಗಳೂರು ವಿಶ್ವದ ಭೂಪಟದಲ್ಲಿ ಬೆರಳಿಟ್ಟು ಗುರುತಿಸುವಂತಹ ಸ್ಥಾನವಾಗಿ ಬೆಳೆದಿದೆ. ಈ ಬೆಳವಣಿಗೆಯ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೊಡುಗೆಯು ಸಹ ಇದೆ. ಇಡೀ ರಾಷ್ಟ್ರಕ್ಕೆ ಇಂಜಿನಿಯರಗಳನ್ನು ಒದಗಿಸಿಕೊಟ್ಟ ಹೆಮ್ಮೆ ವಿಶ್ವವಿದ್ಯಾಲಯದ್ದಾಗಿದೆ. ಇದೆ ಸಂದರ್ಭದಲ್ಲಿ ವಿಶ್ವವಿದ್ಯಾಲಯ ತನ್ನ 25 ನೇ ವರ್ಷದ ರಜತ ಮಹೋತ್ಸವವನ್ನು ಕೂಡ ಆಚರಿಸುತ್ತಿದೆ. ಈ 25 ವರ್ಷಗಳಲ್ಲಿ ಇಡೀ ರಾಷ್ಟ್ರ ಕಟ್ಟುವಲ್ಲಿ ಈ ದೇಶಕ್ಕೆ ಇಂಜಿನಿಯರಗಳನ್ನು ನೀಡಿದ್ದು ಈ ವಿಶ್ವವಿದ್ಯಾಲಯದ ಹೆಮ್ಮೆ, ಪ್ರಸ್ತುತ ಸಭೆಯಲ್ಲಿ ಸನ್ಮಾನಿತರಾಗಿರುವ ಶ್ರೀ ಅರವಿಂದ ಪಾಟೀಲ್ ಅವರು ಕೂಡ ಇದೇ ವಿಶ್ವದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ವಿಷಯವನ್ನು ಸಹ ನೆನಪಿಸಿಕೊಂಡರು.
ಡಾ.ಸಿ.ಕೆ ಸುಬ್ಬರಾಯ ಅವರು ಪ್ರಶಸ್ತಿ ವಿಜೇತರ ಸೇವೆಯನ್ನು ಶ್ಲಾಘಿಸುತ್ತ ವಿತಾವಿ ಸಾಧನೆ ಇನ್ನೂ ಹೀಗೆ ಬೆಳೆಯಲಿ ಎಂದು ಆಶಿಸಿದರು. ಪ್ರಸಾರಾಂಗದ ನಿರ್ದೇಶಕರಾದ ಡಾ. ಮಹಾಂತೆಶ ಎನ್ ಬಿರ್ಜೆ ಅವರು ಸಮಾರಂಭ ಆಯೋಜನೆ ಉದ್ದೇಶದ ಕುರಿತು ಮಾತನಾಡಿದರು. ಶ್ರೀಮತಿ ಎಂ.ಎ.ಸಪ್ನಾ ಹಣಕಾಸು ಅಧಿಕಾರಿಗಳು ಸದರಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು. ಡಾ.ಶಾಂತಾ ಪೋರಾಪೂರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ತರುವಾಯ “ಜಯ ಭಾರತ ಜನನಿಯ ತನುಜಾತೆ” ಧಾರವಾಡ ತಂಡದಿಂದ ಗೀತಕಥನ ಹಾಗೂ ನೃತ್ಯ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಗಮನ ಸೆಳೆದರು./////