Belagavi News In Kannada | News Belgaum

ರಿಂಗ್ ರೋಡ್ ನಿರ್ಮಾಣಕ್ಕೆ ವಿರೋಧಿಸಿ ರೈತರ ಪ್ರತಿಭಟನೆ ವಿಡಿಯೋದಲ್ಲಿ ಏನಿದೆ ಬನ್ನಿ ನೋಡೋಣ

ಬೆಳಗಾವಿ: ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ಭೂಸ್ವಾಧೀನಪಡಿಸಿ ನಿರ್ಮಿಸಲಾಗುತ್ತಿರುವ ರಿಂಗ್‌ರೋಡ್ ಯೋಜನೆಯನ್ನು ವಿರೋಧಿಸಿ ಬೆಳಗಾವಿ ತಾಲೂಕಿನ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ನಗರದಲ್ಲಿ33 ಕ್ಕೂ ಅಧಿಕ ಗ್ರಾಮಗಳಿಂದ ಆಗಮಿಸಿದ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆಯೊದಕ್ಕೂ ಬಾರುಕೋಲು ಚಳವಳಿ, ಡೊಳ್ಳು ಬಾರಿಸುತ್ತಾ ಬೃಹತ್ ಮೆರವಣಿಗೆಯಲ್ಲಿ ರೈತರು‌ ಸಾಗಿದರು. ಬೆಳಗಾವಿ ತಾಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರಿಂಗ್ ರೋಡ್ ಮಾಡಲು ಸರ್ಕಾರ ಯೋಜಿಸಿದೆ.

ಆದರೆ ಇದರಿಂದ ಫಲವತ್ತಾದ ಭೂಮಿ ಕಳೆದುಕೊಂಡು ರೈತ ಬೀದಿಗೆ ಬರುತ್ತಿದ್ದಾನೆ. ಹಾಗಾಗಿ ರಿಂಗ್ ರೋಡ್‌ಗೆ ಬೆಳಗಾವಿ ತಾಲೂಕಿನ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ರಿಂಗ್ ರೋಡ್ ಯೋಜನೆಯಿಂದ 1300 ಎಕರೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ.‌

ಕಳೆದ ಎರಡು ವರ್ಷಗಳಿಂದ ರಿಂಗ್ ರೋಡ್ ಬೇಡ ಎಂದು ಹೋರಾಟ ನಡೆಸಲಾಗುತ್ತಿದೆ.‌ ನಗರಕ್ಕೆ ರಿಂಗ್‌ ರಸ್ತೆ ನಿರ್ಮಿಸಲು ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲು ಸರಕಾರ ಮುಂದಾಗಿದ್ದು, ಈ ಯೋಜನೆ ಕೈ ಬಿಡಬೇಕು. ರಿಂಗ್‌ ರಸ್ತೆ ನಿರ್ಮಾಣಕ್ಕಾಗಿ ಬೆಳಗಾವಿ ತಾಲೂಕಿನ ಅಗಸಗಾ, ಅಂಬೇವಾಡಿ, ಬಾಚಿ, ಬದರವಾಡಿ, ಬೆಳಗುಂದಿ, ಬಿಜಗರಣಿ, ಮುತಗಾ, ನವಗೆ ಸೇರಿದಂತೆ 32ಕ್ಕು ಹೆಚ್ಚು ಗ್ರಾಮಗಳ ಒಟ್ಟು 509.76 ಹೆಕ್ಟೇರ್‌ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸರಕಾರ ಮುಂದಾಗಿದೆ. ಈ ಬಗ್ಗೆ ನೋಟಿಫಿಕೇಶನ್‌ ಸಹ ಮಾಡಲಾಗಿದೆ.

ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಕೃಷಿ ಭೂಮಿಯೇ ಜೀವನಾಧಾರವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ರಿಂಗ್‌ ರಸ್ತೆ ನಿರ್ಮಿಸುವ ಯೋಜನೆ ಆದಷ್ಟು ಶೀಘ್ರದಲ್ಲಿ ಕೈಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬೆಳಗಾವಿ ತಾಲೂಕಿನ ಮುಚ್ಚಂಡಿ, ಜಾಡ್ ಶಾಹಾಪುರ್, ಬೀಜಗರ್ಣಿ, ಬೆಳಗುಂದಿ, ಹಲಗಾ ಸೇರಿ 32ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.//////