ಉದ್ಯಮಭಾಗದಲ್ಲಿ ಬರುವ ಡಿ.3 ಮತ್ತು 4 ರಂದು ರಾಷ್ಟ್ರೀಯಮಟ್ಟದ “ಇಂಡಸ್ಟ್ರೀಸ್ 4.0 ” ಸೆಮಿನಾರ

ಬೆಳಗಾವಿ : ಉದ್ಯಮಭಾಗದಲ್ಲಿ ಬರುವ ಡಿ.3 ಮತ್ತು 4 ರಂದು ರಾಷ್ಟ್ರೀಯಮಟ್ಟದ ಸೆಮಿನಾರ ಆಯೋಜಿದಲಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ ಚೇರಮನ್ ರಮೇಶ ಜಂಗಲ ಹೇಳಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. “ಇಂಡಸ್ಟ್ರೀಸ್ 4.0 “ಎಂಬ ವಿ಼ಷಯದ ಕುರಿತು ಸೆಮಿನಾರ ನಡೆಸಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದೆ ಶ್ರೀಮತಿ ಮಂಗಳಾ ಅಂಗಡಿ ನೆರವೇರಿಸಲಿದ್ದಾರೆ ಹಾಗೂ ಶಾಸಕ ಶ್ರೀ ಅಭಯ ಪಾಟೀಲ ಅಧ್ಯಕ್ಷತೆ ವಹಿಸಲಿರುವರು..
ಡಿ.4 ರಂದು ನಡೆಯುವ ವಿಚಾರ ಸಂಕಿರಣ ಕಾರ್ಯಕ್ರಮದ ಮುಕ್ತಾಯ ಸಮಾರಂಭಕ್ಕೆ ವಿ.ಟಿ ಯು ಕುಲಪತಿ ಶ್ರೀ ವಿದ್ಯಾಶಂಕರ ಮುಖ್ಯ ಅತಿಥಿಯಾಗಿ ಹಾಗೂ ಮಾಜಿ ಸಂಸದ ಶ್ರೀ ಪ್ರಭಾಕರಕೋರೆ ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.. ಇಂಡಸ್ಟ್ರೀಸ್ 4.0 ಕುರಿತ ವಿಷಯವಾಗಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಉಪನ್ಯಾಸ ಮಾಡಲಿದ್ದಾರೆ. ಈ ಸೆಮಿನಾರದಲ್ಲಿ ಅತೀ ಹೆಚ್ಚು ಜನರು ಭಾಗಿಯಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ದಿ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ ವತಿಯಿಂದ ನಿರಂತರ ವಾಗಿ ತಾಂತ್ರಿಕ ಭಾಷಣಗಳು,ವಿಚಾರ ಸಂಕಿರಣಗಳು ಕಾಯಾ೯ಗಾರಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಬೆಳಗಾವಿಯಲ್ಲಿ ಈ ಸೆಮಿನಾರವನ್ನು ಆಯೋಜಿಸಲಾಗಿದೆ ಎಂದರು.
ಬೆಳಗಾವಿ ಫೌಂಡರಿ ಕ್ಲಸ್ಟರಿನ ಅಧ್ಯಕ್ಷ ಶ್ರೀ ರಾಮ ಭಂಡಾರಿ ಮಾತನಾಡಿ ಬೆಳಗಾವಿಯಲ್ಲಿ ಕೈಗಾರಿಕಾ ಕಂಪನಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಬರುವ ಅಧಿವೇಶನದಲ್ಲಿ ಈ ಕುರಿತು ಮುಖ್ಯಮಂತ್ರಿ ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದರು.
ಹಿರಿಯ ಇಂಜನಿಯರ ವಿ.ಬಿ.ಜಾವೂರ, ವಿಲಾಸ ಬದಾಮಿ,ಪ್ರೊ ಸಿ ಬಿ ಹಿರೇಮಠ, ಬಿ ಜಿ ಧರೆಣ್ಣಿ,ಮಹೇಶ ಮಿಶ್ರೀಕೋಟಿ, ಜೆ ಸಿ ನೂಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು./////