Belagavi News In Kannada | News Belgaum

ರಕ್ತದಾನ ಎಲ್ಲ ದಾನಗಳಗಿಂತ ಶ್ರೇಷ್ಠವಾದುದು : ಡಾ. ಪೂಜಾರ

ಬೆಳಗಾವಿ:  ರೋಟರಿ ಕ್ಲಬ್ ಆಫ್ ಬೆಳಗಮ್ (ಮಿಡ್ ಟೌನ್), ಜಿ.ಐ.ಟಿ. ಯ ಇ ಮತ್ತು ಇ ಇಂಜನಿಯರಿಂಗ ವಿಭಾಗ ಇವರು ಬೆಳಗಾವಿ ಬ್ಲಡ್ ಸೆಂಟರ್ – ಬೆಳಗಾವಿ, ಎಚ್.ಡಿ.ಎಫ್.ಸಿ. ಬ್ಯಾಂಕ್ – ಬೆಳಗಾವಿ ಇವರ ಸಹಯೋಗದೊಂದಿಗೆ ಉದ್ಯಮಬಾಗದಲ್ಲಿರುವ ಜಿ.ಐ.ಟಿ. ಇ ಮತ್ತು ಇ. ವಿಭಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.
ರೋಟರಿ ಕ್ಲಬ್ ಆಫ್ ಬೆಳಗಾವಿ (ಮಿಡ್ ಟೌನ್) ಅಧ್ಯಕ್ಷರಾದ ಡಾ. ವಿಜಯ ಪೂಜಾರ ಶಿಬಿರವನ್ನು ಉದ್ಘಾಟಿಸಿ ಮತನಾಡಿದರು, ರಕ್ತದಾನ ಎಲ್ಲ ದಾನಗಳಗಿಂತ ಶ್ರೇಷ್ಠವಾದುದು. ರಕ್ತದಾನದಿಂದ ಮತ್ತೊಂದು ಜೀವವನ್ನು ಸಂಕಷ್ಟದಿಂದ ಪಾರು ಮಾಡಿದಂತಾಗುತ್ತದೆ. ಆದ್ದರಿಂದ ಎಲ್ಲರೂ ರಕ್ತದಾನ ಮಾಡುವಂತೆ ಕೇಳಿಕೊಂಡರು. ಈ ಶಿಬೀರದಲ್ಲಿ 104 ಯುನಟ್ ರಕ್ತ ಸಂಗ್ರಹಿಸಲಾಯಿತು.
ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ, ಜಿ.ಐಟಿ. ಇ. ಮತ್ತು ಇ. ವಿಭಾಗದ ಮುಖ್ಯಸ್ಥರಾದ ಡಾ. ದೀಪಕ ಕುಲಕರ್ಣಿ, ಇ.ಇ.ಇ. ಮಖ್ಯಸ್ಥರು ಮತ್ತು ಕಾರ್ಯಕ್ರಮ ಸಂಯೋಜಕರಾದ ಪೊ. ನಿಖಿಲ ಚಿಟಮಗರ, ಬೆಳಗಾವಿ ಬ್ಲಡ್ ಸೆಂಟರ್‍ದ ಎಂ.ಡಿ ಗಳಾದ ಶ್ರೀ ಗಿರೀಷ ಬುಡರಕಟ್ಟಿ, ಎಚ್.ಡಿ.ಎಂ.ಸಿ. ಬ್ಯಾಂಕ್ ಮುಖ್ಯಸ್ಥರಾದ ಚಿದಂಬರ ಮೂರ್ತಿ, ಎಚ್. ಡಿ. ಎಫ್.ಸಿ. ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ವಿಜಯಾನಂದ ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ (ಮಿಡ್ ಟೌನ್) ದ ಆನಂದ ಗುಮಾಸ್ತೆ, ಗುಲಾಬಚಂದ ಚೌಗಲಾ, ಅಶೋಕ ಬದಾಮಿ, ಸತೀಶ ನಾಯಕ ಮುಂತಾದ ಸದಸ್ಯರು ಉಪಸ್ಥಿತರಿದ್ದರು.//////