Belagavi News In Kannada | News Belgaum

ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆ

ಬೆಳಗಾವಿ : ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪದವಿಪೂರ್ವ, ಪದವಿ ಅಥವಾ ತತ್ಸಮಾನ ಪದವಿ, ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಕಥೆಗಳನ್ನು ಕಳುಹಿಸಬಹುದು.
ಕೊನೆಯ ದಿನಾಂಕ ಡಿಸೆಂಬರ್ 30. ಕಥೆಗಳನ್ನು ಶ್ರೀಮತಿ ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ೨೫೫, ವಿಜಯಾ ರೆಸಿಡೆನ್ಸಿ, ಗುರುಪ್ರಸಾದ ಕಾಲೋನಿ, ಮುಖ್ಯ ರಸ್ತೆ , ತಿಲಕವಾಡಿ ಬೆಳಗಾವಿ – ೦೬ ಈ ವಿಳಾಸಕ್ಕೆ ಕಳುಹಿಸಬೇಕು.
ಕಥೆಗಳನ್ನು ಕಳುಹಿಸುವವರು ಸಂಪೂರ್ಣ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ ಬರೆದು ಡಿಸೆಂಬರ್ ೩೦ ರೊಳಗೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ೯೪೮೧೬೫೬೪೦೫, ೯೮೪೫೫೯೯೧೪೪,
ಗಳಿಗೆ ಸಂಪರ್ಕಿಸ ಬಹುದಾಗಿದೆ.//////