Belagavi News In Kannada | News Belgaum

ಬೆಳಗಾವಿಯ ಸುವರ್ಣ ಸೌಧ ದಲ್ಲಿ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ 

ಬೆಳಗಾವಿ : ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ 02-12-2022ರಂದು ಜಿಲ್ಲಾ ಪಂಚಾಯತ್ ಬೆಳಗಾವಿ ಆಯೋಜಿತ ಸುವರ್ಣ ಸೌಧ ಬೆಳಗಾವಿನಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಹಾಗೂ ಜಲ್ ಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಈ ಸಭೆಯಲ್ಲಿ ಶ್ರೀ ಎಲ್.ಕೆ ಅತೀಕ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವರು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯ ವೈಯಕ್ತಿಕ ಶೌಚಾಲಯದ(IHHL) ಆನ್ ಲೈನ್ ಅಪ್ಲಿಕೇಶನ್,ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ,ಮಲತ್ಯಾಜ್ಯ ನಿರ್ವಹಣೆ ಕುರಿತು ಚರ್ಚಿಸಿದರು.
ಅದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ WQMS,FHTC Quality Management,MVS,Har Ghar jal decleration,FTK Training/Test Status ಚರ್ಚಿಸಿದರು.
ಈ ಕಾರ್ಯಾಗಾರದಲ್ಲಿ ಏಳು‌ ಜಿಲ್ಲೆಗಳಾದ ಗದಗ,ಹಾವೇರಿ,ಬಾಗಲಕೋಟೆ,ಉತ್ತರ ಕನ್ನಡ,ಹಾವೇರಿ,
ಧಾರವಾಡ ಮತ್ತು ಬೆಳಗಾವಿ ಈ ಎಲ್ಲ ಜಿಲ್ಲೆಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯ ನೋಡಲ್ ಅಧಿಕಾರಿಗಳು,
ರಾಜ್ಯ ಕಚೇರಿಯ ಉಪಕಾರ್ಯದರ್ಶಿಗಳು ಶ್ರೀ ಮಹೇಶ ಎಸ್.ಸಿ ಹಾಗೂ ಐ.ಎಸ್.ಎ ನಿರ್ದೇಶಕರು,
ಹೆಚ್.ಆರ್.ಡಿ ಸಮಾಲೋಚಕರು,RWS ಇಂಜಿನಿಯರ್ಸ್,ಎಲ್ಲ
ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಎಸ್.ಬಿ.ಎಮ್ ಯೋಜನೆಯ ಎಲ್ಲ ಜಿಲ್ಲಾ ಸಮಾಲೋಚಕರು, ಜಿಲ್ಲಾ ಯೋಜನಾ ವ್ಯವಸ್ಥಾಪಕರು ಬೆಳಗಾವಿ/ಚಿಕ್ಕೋಡಿ ವಿಭಾಗ, ISA/ISRA ತಂಡದ ನಾಯಕರು ಭಾಗವಹಿಸಿದ್ದರು.//////