Belagavi News In Kannada | News Belgaum

ರಸ್ತೆಯಲ್ಲಿ ಅಣ್ಣನನ್ನೇ ಕೊಂದ ತಮ್ಮ

ಚಿಕ್ಕೋಡಿ :  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ನಿಪ್ಪಾಣಿ-ಮುಧೋಳ ರಸ್ತೆಯಲ್ಲಿ ಅಣ್ಣನನ್ನೇ ಕೊಂದ ತಮ್ಮ ಪೊಲೀಸ್​ ಠಾಣೆಗೆ ಹೋಗಿ ಶರಣಾದ ಘಟನೆ ನಡೆದಿದೆ.
ಅಕ್ಬರ್​​ ಅಬ್ದುಲ್ ಶೇಖ್​​ (42) ಕೊಲೆಯಾದ ದುರ್ದೈವಿ. ಅಮಜಾದ್ ಶೇಖ್ ಎಂಬಾತನೇ ಕೊಲೆಗೈದ ತಮ್ಮನಾಗಿದ್ದಾನೆ.
ಅಕ್ಬರ್ ಶೇಖ್ ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಅಮಜಾದ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ‌ ಕೊಲೆ ಮಾಡಿದ್ದಾನೆ. ಹಳೆಯ ವೈಷಮ್ಯ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ‌ತಿಳಿದು ಬಂದಿದೆ.ಈ ಕುರಿತು ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.