Belagavi News In Kannada | News Belgaum

ಅಭಿವೃದ್ಧಿ ಕಾರ್ಯ ಗುರುತಿಸಿ ಆಶೀರ್ವದಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಯಮಕನಮರಡಿ: ಕಳೆದ ಮೂರು ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು,  ಅಧಿಕಾರವನ್ನು ಸೇವೆ ಎಂದು ಭಾವಿಸಿ ಯಮಕನಮರಡಿ ಮತಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. 

 

ಪಾಶ್ಚಾಪೂರ ಗ್ರಾಮದ ಕನ್ನಡ ಸರ್ಕಾರಿ ಶಾಲೆಯಲ್ಲಿ ಜೈನ್‌  ಸಮುದಾಯ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ನೂತನ ಕಾರ್ಮಿಕರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಯಮಕನಮರಡಿ ಮತಕ್ಷೇತ್ರದಾದ್ಯಂತ ಜನರು ಮೆಚ್ಚುವಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕೇವಲ ಪ್ರಚಾರ ಮತ್ತು ಮಾತುಗಳಿಗೆ ಸೀಮಿತವಾಗದೆ ಎಲ್ಲರ ಕಣ್ಣಿಗೆ ಕಾಣುವ ಹಾಗೆ ಕ್ಷೇತ್ರದ ಅಭಿವೃದ್ಧಿಯಾಗಿದೆ. ಜನರು ಇದನ್ನು ಗುರುತಿಸಬೇಕು. ಮುಂದೆಯೂ ಕೂಡ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು. 

ನಾವು 20 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ ಪ್ರಚಾರ ಬಯಸಲ್ಲ. ಆದರೆ ಬಿಜೆಪಿಯವರು 5 ಲಕ್ಷ ರೂ. ಕಾಮಗಾರಿಗಳನ್ನು ಮಾಡಿ 50 ಪೋಸ್ಟರ್‌ ಹಚ್ಚುತ್ತಾರೆ. ಇದನ್ನು ನಿವೇ ಗಮನಿಸಬೇಕು. ಯಾವಾಗಲೂ ಶಾಶ್ವತ ನಮ್ಮ ಜತೆ ಯಾರು ಇರುತ್ತಾರೆ ಎಂಬುವುದನ್ನು ನೀವು ಅರಿತು ಅವರನ್ನೇ ಬೆಂಬಲಿಸಬೇಕೆಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಅಬ್ದುಲ್‌ ಗಣಿ ದರ್ಗಾ, ಡಾ. ಅಶೋಕ ಹುಮಣಾಬದಿಮಠ, ಪುರುಷೋತ್ತಮ ನಾಡಗೌಡಾ, ಸಂದ್ಯಾರಾಜ ಮಾನೆ, ರಫೀಕ್‌ ಪಿರ್ಜಾದೆ, ಸಚೀನ್‌ ಮುತ್ತನಾಳ, ಬಸವಣ್ಣ ಆಡಿಮನಿ, ವಿನೋದ ಹುಮನಾಮದಿಮಠ, ನಜೀರ್‌ ಮೋಮಿನ್‌, ವಿಕ್ರಮ ಕುಡಜೋಗಿ, ಪಾಶ್ಚಾಪೂರ ಗ್ರಾಪಂ ಸದಸ್ಯರು,  ಜೈನ್‌  ಸಮುದಾಯದ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಇದ್ದರು.//////