Belagavi News In Kannada | News Belgaum

ಎಮ್ಮೆಗಳ ಓಡಿಸುವ ಸ್ಪರ್ದೆ : ಶಾಸಕ ಅನಿಲ ಬೆನಕೆ ಭಾಗಿ

ಬೆಳಗಾವಿ :ದಿನಾಂಕ 04-12-2022 ರಂದು ಸ್ವಯಂಭು ಗವಳಿ ನಗರ ಮತ್ತು ಗ್ರಾಮೀಣ ವಿಕಾಸ ಸಂಸ್ಥೆ ,  ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಎಲ್.ಇ ಇಂಟರ್‍ನ್ಯಾನಲ್ ಶಾಲೆ ಹತ್ತಿರದ ಓಂಕಾರ ನಗರ ಶಿವನಗರ ಹಿಂಡಲಗಾದಲ್ಲಿ ಆಯೋಜಿಸಲಾದ ಮೋಟಾರ ಬೈಕ್‍ಗಳ ಜೊತೆಗೆ ಎಮ್ಮೆ ಓಡಿಸುವ ಸ್ಪರ್ದೆಯ ವೇಧಿಕೆ ಕಾರ್ಯಕ್ರಮಕ್ಕೆ ಶಾಸಕ ಅನಿಲ ಬೆನಕೆರವರು ಚಾಲನೆ ನಿಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ಪ್ರತಿ ವರ್ಷವೂ ದೀಪಾವಳಿ ಪ್ರಯುಕ್ತ ಸಾಂಪ್ರದಾಯಿಕವಾಗಿ ಎಮ್ಮೆಗಳನ್ನು ಓಡಿಸುವ ಪದ್ದತಿಯು ನಮ್ಮ ಸಂಸ್ಕøತಿಯಲ್ಲಿ ಹಳೆಯ ಪದ್ದತಿಯಾಗಿದೆ. ಗವಳಿ ಸಮಾಜದಲ್ಲಿ ಹಸು ಮತ್ತು ಎಮ್ಮೆಗಳನ್ನು ತಾಯಿ ಎಂದು ಪೂಜಿಸಲಾಗುತ್ತದೆ ಎಂದ ಅವರು ನಮ್ಮ ಭಾರತದ ಪರಂಪರೆಗಳನ್ನು ನಾವೆಲ್ಲರೂ ಹಿಗೇಯೆ ಮುಂದುವರೆಸಿಕೊಂಡು ಹೋಗೋಣ ಎಂದರು.

ಈ ಸಂದರ್ಭದಲ್ಲಿ ಎಲ್ಲ ಬೀದಿಗಳಲ್ಲಿ ಒಟ್ಟಾಗಿ ಎಮ್ಮೆಗಳನ್ನು ಓಡಿಸಿ ನೆರೆದ ನಾಗರಿಕರಿಗೆ ಮನರಂಜನೆ ನೀಡುವುದು ಸಂಪ್ರದಾಯವಾಗಿದೆ. ಸ್ಪರ್ದೆಯಲ್ಲಿ ಗೆದ್ದಂತಹ ಎಮ್ಮೆಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಪರಶುರಾಮ ನಾಗುರ್ಡೆಕರ, ಕಿಶೋರ ಬಾತಖಂಡೆ, ಸಿದ್ದಾರ್ಥ ಬಿಜಾಪೂರೆ, ಪ್ರವೀಣ ಬಾತಖಂಡೆ, ಕಿರಣ ಬಾತಳಖಂಡೆ, ಗೋಪಿ ಕಾಕತಕರ, ಅಭಯ ಸಪಕಾಳೆ, ಸಂದೀಪ ಹಾಗೂ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.//////