Belagavi News In Kannada | News Belgaum

ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ‌ಮುಖಂಡರ ಬಂಧನ

ಬೆಳಗಾವಿ: ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಅನುಮತಿ ನೀಡುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಆಗಮಿಸಿದ್ದ ಎಂಇಎಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಇದೆ ವಿಷಯಕ್ಕೆ ಸಂಬಂದಿಸಿದಂತೆ ಎಂಇಎಸ್ ವಿರುದ್ಧ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದು, ಇಂತಹ ವೇಳೆಯಲ್ಲಿ ಎಂಇಎಸ್ ಪುಂಡರು ಸುಮ್ಮನೆ ಕುಡದೆ ಮತ್ತೆ ಪ್ರತಿಭಟನೆ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.‌
ಜಿಲ್ಲಾಧಿಕಾರಿ ನಿತೇಶ ಪಾಟೀಲ ಆಗಮಿಸುತ್ತಿದ್ದಂತೆ ಗಲಿಬಿಲಿಗೊಂಡ ಬೆರಳಣಿಕೆಯ ಪುಂಡ ಎಂಇಎಸ್ ನಾಯಕರಿಗೆ ಕ್ಯಾರೆ ಎನ್ನದೆ ತಮ್ಮ ಕಚೇರಿಯತ್ತ ತೆರಳಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎಂಇಎಸ್ ಪುಂಡರಿಗೆ ಕೇವಲ ನಾಲ್ಕು ಜನಕ್ಕೆ ಮಾತ್ರ ತೆರಳಿ ಮನವಿ ಸಲ್ಲಿಸುವಂತೆ ಕೊರಿದರೂ ಪೊಲೀಸರ ಮಾತಿಗೆ ಗೌರವ ಕೊಡದೆ ಪುಂಡಾಟ ಮೆರೆಯಲು ಮುಂದಾದರೂ ಅಲ್ಲದೆ, ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು‌ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನೆಗೆ ಆಗಮಿಸಿದ್ದ ಪುಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.//////