ಈರಣ್ಣ ಕಾಜಗಾರರರಿಗೆ ಪಿ.ಎಚ್ಡಿ ಪ್ರದಾನ

ಬೆಳಗಾವಿ; ಬೆಳಗಾವಿ ಜಿಲ್ಲೆ ಕಾಕತಿ(ಅರವಳ್ಳಿ) ಗ್ರಾಮದ ಶ್ರೀ ಅರ್ಜುನ ಈರಪ್ಪಾ ಕಾಜಗಾರ ಹಾಗೂ ಶ್ರೀಮತಿ ಸುನೀತಾ ಅರ್ಜುನ ಕಾಜಗಾರರವರ ಪುತ್ರನಾದ ಶ್ರೀ ಈರಣ್ಣ ಅರ್ಜುನ ಕಾಜಗಾರರವರು ನರ್ಸಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಜೆ.ಜೆ.ಟಿ ಯುನಿವರ್ಸಿಟಿ ರಾಜಸ್ಥಾನದಿಂದ ಪಿ.ಎಚ್ಡಿ ಪದವಿಯನ್ನು ‘ಹೆಲ್ತ್ ಹಜಾರ್ಡ ಆಫ್ ಪ್ಲಾಸ್ಟಿಕ್ ವೇಸ್ಟ್’ ಎಂಬ ವಿಷಯದಲ್ಲಿ ಸಂಶೋಧನೆಯನ್ನು ಮಾಡಿ ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಅವರ ಈ ಸಾಧನೆಗೆ ಕಾಜಗಾರ, ತಳೇಕರ, ಬೋಡ್ಕಿ ಮತ್ತು ಪಾಟೀಲ ಕುಟುಂಬದವರು, ಬಂಧುಗಳು ಹಾಗೂ ಸ್ನೇಹಿತರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ./////