ಗಡಿ ವಿವಾದ ಜೀವಂತವಾಗಿಡಲು ಮಹಾರಾಷ್ಟ್ರ ಪುಂಡಾಟಿಕೆ ಮಾಡುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಗಡಿ ವಿವಾದವನ್ನು ಜೀವಂತವಾಗಿ ಇಡಲು ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆಯುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ಗಡಿ ವಿವಾದದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿ ಭಾಗದ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಹೀಗೆ ಮಾಡ್ತಿದ್ದಾರೆ. ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ. ಈಗಾಗಲೇ ವರದಿ ಬಂದಿದೆ. ಅದನ್ನು ಮಹಾರಾಷ್ಟ್ರದವರು ಒಪ್ಪಲ್ಲ ಅಂದರೆ ಹೇಗೆ? ಮಹಾಜನ್ ಮಹಾರಾಷ್ಟ್ರದವರು. ಅವರು ಕೊಟ್ಟ ವರದಿ ಒಪ್ಪಿಲ್ಲ ಅಂದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.
ಮಹಾಜನ್ ವರದಿ ಒಪ್ಪಿಲ್ಲ. ಅಂದರೆ ಅದು ಮಹಾರಾಷ್ಟ್ರದವರ ಪುಂಡಾಟಿಕೆ. ನಾವು ಪುಂಡಾಟಿಕೆಗೆ ಹೆದರಬಾರದು. ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಇನ್ನು ಸಭೆ ಕರೆದಿಲ್ಲ ಅಂತ ಸಿಎಂ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿ, ಸರ್ಕಾರ ಉತ್ತಮ ಲಾಯರ್ಗಳನ್ನು ಇಟ್ಟು ವಾದ ಮಾಡಬೇಕು ಅಂತ ಸಲಹೆ ಕೊಟ್ಟರು.//////