Belagavi News In Kannada | News Belgaum

ರಾಜಕೀಯವಾಗಿ ಮುಂದೆ ಬರಲು ಬಸವಾದಿ ಶರಣರ ವಚನಗಳೇ ಕಾರಣ : ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ : ಇಂದು ನಾನು ರಾಜಕೀಯವಾಗಿ ಮುಂದೆ ಬರಲು ಬಸವಾದಿ ಶರಣರ ವಚನಗಳೇ ಕಾರಣ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬುಧವಾರ ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಪೂಜ್ಯ ಡಾ.ಶಿವಬಸವ ಮಹಾಸ್ವಾಮಿಗಳ 133ನೇ ಜಯಂತಿ ಮಹೋತ್ಸವ ಹಾಗೂ ಅಕ್ಕನ ಬಳಗದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗ ನಾವು ವಿಧಾನಸೌಧ, ಸಂಸತ್ತು ನೋಡುತ್ತಿದ್ದೇವೆ ಆದರೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಎಂಬ ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿದ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲುತ್ತದೆ. ಅಲ್ಲಮಪ್ರಭುಗಳು, ಅಕ್ಕಮಹಾದೇವಿ ಸೇರಿ ಅನೇಕ ಶರಣರು ಇದರಲ್ಲಿ ಭಾಗಿಯಾಗಿದ್ದು ನಮ್ಮೆಲ್ಲರ ಹೆಮ್ಮೆ.

ಭೂಮಿ, ಗೋವು, ನದಿ, ಪ್ರಕೃತಿಗೆ ನಮ್ಮ ದೇಶದಲ್ಲಿ ಪವಿತ್ರ ತಾಯಿಯ ಸ್ಥಾನ ನೀಡಲಾಗಿದೆ. ಪೂಜ್ಯರು ತಾಯಂದಿರಿಗೆ ಸಂಸ್ಕಾರ ಕೊಟ್ಟಾಗ ತಾಯಂದಿರು ಮಕ್ಕಳಿಗೆ ಸಂಸ್ಕಾರ ಕೊಡಲು ಸಾಧ್ಯವಾಗುತ್ತದೆ. ಸಮಾಜ ಸದೃಢ, ಸಂಸ್ಕಾರಯುತವಾಗಲು ಸ್ವಾಮೀಜಿಗಳ ಅವಶ್ಯಕತೆಯಿದೆ. ನಾಗನೂರು ಮಠ ಅನ್ನ, ಅಕ್ಷರ ದಾಸೋಹ ಮಾಡುವ ಮೂಲಕ ಅನೇಕ ಮಕ್ಕಳಿಗೆ ಬದುಕು ಕಟ್ಟಿ ಕೊಟ್ಟಿದೆ ಎಂದರು.
ಜಯಶ್ರೀ ನಿರಾಕಾರಿ, ನೀಲಗಂಗಾ ಚರಂತಿಮಠ, ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ, ಜಯಶೀಲಾ ಬ್ಯಾಕೋಡ ಅವರು ರಚಿಸಿರುವ ಧರೆಗಿಳಿದ ಶರಣೆಯರು ಗ್ರಂಥವನ್ನು ಲೋಕಾಪರ್ಣೆಗೊಳಿಸಲಾಯಿತು. ಡಾ.ಎಪ್.ವ್ಹಿ. ಮಾನ್ವಿ, ಡಾ. ಬಿ.ಎಸ್. ಗವಿಮಠ ಅವರಿಗೆ ಅಮೃತ ಅಭಿನಂದನೆ ಸಲ್ಲಿಸಲಾಯಿತು.

ಪೆÇ್ರ.ಬಿ.ಎಸ್. ಗವಿಮಠ ಮಾತನಾಡಿ ನಾವು ಎಷ್ಟು ವರ್ಷ ಬದುಕಿದರೂ ಅರ್ಥಪೂರ್ಣ ಬದುಕು ನಮ್ಮದಾಗಬೇಕು. ಬದುಕು ಕ್ಷಣಿಕ. ಪ್ರತಿಕ್ಷಣ ಬದುಕಬೇಕು. ಕ್ಷಣಿಕ ಬದುಕು ಸಾರ್ಥಗೊಳಿಸಿಕೊಳ್ಳಬೇಕು. ಸಮಾಜದಿಂದ ರೂಪುಗೊಂಡು ಸಮಾಜಮುಖಿ ಆಗಬೇಕು. ರಾಜಕಾರಣಕ್ಕಿಂತ ಸಮಾಜಕಾರಣದ ಅವಶ್ಯಕತೆಯಿದೆ. ನಾವು ಎಷ್ಟು ವರ್ಷ ಬದುಕಿದರೂ ಅರ್ಥಪೂರ್ಣ ಬದುಕು ನಮ್ಮ ಬದುಕಾಗಬೇಕು. ಬದುಕು ಕ್ಷಣಿಕ. ಪ್ರತಿಕ್ಷಣ ಬದುಕಬೇಕು. ಕ್ಷಣಿಕ ಬದುಕು ಸಾರ್ಥಗೊಳಿಸಿಕೊಳ್ಳಬೇಕು. ಸಮಾಜದಿಂದ ರೂಪುಗೊಂಡು ಸಮಾಜಮುಖಿ ಆಗಬೇಕು. ರಾಜಕಾರಣಕ್ಕಿಂತ ಸಮಾಜಕಾರಣದ ಅವಶ್ಯಕತೆಯಿದೆ ಎಂದರು.
ಗದಗ ಡಂಬಳದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಗುಣದಾಳದ ವಿವೇಕಾನಂದ ದೇವರಿಗೆ ಗೌರವ ಸಮ್ಮಾನ ಮಾಡಿದರು. ಶೇಗುಣಸಿಯ ಡಾ.ಮಹಾಂತ ಸ್ವಾಮೀಜಿ, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗಿರಿಜಾ ಮುಳಗುಂದ ಸ್ವಾಗತಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು. ಜ್ಯೋತಿ ಬದಾಮಿ ಶರಣು ಸಮರ್ಪಿಸಿದರು. ಶರಣ-ಶರಣೆಯರು, ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಫೆÇೀಟೋ ಶೀಷಿಕೆ: ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುತ್ತಿರುವುದು./////