Belagavi News In Kannada | News Belgaum

ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಗಳ 133ನೇ ಜಯಂತಿ ನಿಮಿತ್ಯ ನಗರದಲ್ಲಿ ಭವ್ಯ ಮೆರವಣಿಗೆ

ಬೆಳಗಾವಿ : ಗುರುವಾರ ಬೆಳಿಗ್ಗೆ ಲಿಂಗರಾಜ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಗೆ ಡಾ. ಅಲ್ಲಮಪ್ರಭು ಸ್ವಾಮೀಜಿ ಚಾಲನೆ ನೀಡಿದರು. ರಾಣಿ ಚನ್ನಮ್ಮ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ ಮಾರ್ಗವಾಗಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿಗೆ ಬಂದು ಸಮಾಪ್ತಿಯಾಯಿತು. ಮೆರವಣಿಗೆಯಲ್ಲಿ ಜಗಜ್ಯೋತಿ ಬಸವೇಶ್ವರ, ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ರಾಣಿ ಚನ್ನಮ್ಮ ಸೇರಿ ಇನ್ನಿತರ ಮಹಾಪುರುಷರ ವೇಷಭೂಷಣ ತೊಟ್ಟ ಮಕ್ಕಳು, ಮಠ ಪರಂಪರೆ, ಶರಣರು, ಶರಣ ಸಾಹಿತ್ಯ, ಕನ್ನಡ ನಾಡು ನುಡಿ ಬಿಂಬಿಸುವ ರೂಪಕಗಳು ಎಲ್ಲರ ಕಣ್ಮನ ಸೆಳೆದವು. ವಿವಿಧ ವಾದ್ಯ ಮೇಳಗಳು, ವಿದ್ಯಾರ್ಥಿನಿಯರ ಕೋಲಾಟ ಮೆರವಣಿಗೆಗೆ ಮತ್ತಷ್ಟು ಮೆರಗು ತಂದು ಕೊಟ್ಟವು.

ಮೆರವಣಿಗೆಯಲ್ಲಿ ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಶಿವಯೋಗಿ ದೇವರು, ಗುರುದೇವಾರ್ಯರು, ಮಾಜಿ ವಿಧಾನಪರಿಷತ ಮಹಾಂತೇಶ ಕವಟಗಿಮಠ ಸೇರಿ ಇನ್ನಿತರ ಗಣ್ಯರು, ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರುಗುರುವಾರ ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಲ್ ಕಾಲೇಜಿನ ಆವರಣದಲ್ಲಿ ಕಾಯಕಯೋಗಿ, ಮಹಾಪ್ರಸಾದಿ ಲಿಂ.ಡಾ. ಶಿವಕುಮಾರ ಮಹಾಸ್ವಾಮಿಗಳ 133ನೇ ಜಯಂತಿ, ಪೂಜ್ಯಶ್ರೀ ಡಾ.ಶಿವಬಸವ ಮಹಾಸ್ವಾಮಿಗಳ ವಸ್ತು ಸಂಗ್ರಹಾಲಯ ಉದ್ಘಾಟನೆ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಎಲ್ಲ ಕ್ಷೇತ್ರಗಳಲ್ಲಿ ಡಾ.ಶಿವಬಸವ ಪೂಜ್ಯರು ಸಾಧನೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಏಳಿಗೆ, ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಬೆಳಗಾವಿ ಕರ್ನಾಟಕದಲ್ಲಿ ಉಳಿಸುವ ಸಂಬಂಧ ಫಜಲ್ ಅಲಿ ಆಯೋಗ, ಮಹಾಜನ್ ಆಯೋಗದ ಮಂದೆ ಸಮರ್ಥವಾಗಿ ವಾದ ಮಂಡಿಸಿದ್ದರು. ಮಹಾಜನ್ ಆಯೋಗದ ಮುಂದೆ ಬಲವಾದ ಸಾಕ್ಷ್ಯಾಧಾರಗಳನ್ನು ನೀಡಿ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯುವಂತೆ ಮಾಡಿದವರು ಡಾ.ಶಿವಬಸವ ಮಹಾಸ್ವಾಮಿಗಳು. ಗಡಿ ವಿಷಯ ಇದೊಂದು ರಾಜಕೀಯ ಹೋರಾಟದ ವಿಷಯವಾಗಿದೆ. ಕರ್ನಾಟಕದಲ್ಲಿಯೇ ಬೆಳಗಾವಿ ಶಾಶ್ವತವಾಗಿ ಉಳಿಸಲು ಬೆಳಗಾವಿ ಕನ್ನಡಿಗರು ವಿಶೇಷ ಆಸಕ್ತಿ ತೋರಿಸಬೇಕು. ಪ್ರತಿನಿತ್ಯ ಕನ್ನಡವನ್ನೇ ಬಳಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡಬೇಕು. ನವೆಂಬರ್ 1 ಕನ್ನಡವಾಗದೇ ನಂಬರ್ 1 ಕನ್ನಡವಾಗಬೇಕು. ಅಂದಾಗ ಮಾತ್ರ ಶಾಶ್ವತವಾಗಿ ಬೆಳಗಾವಿ ಸಮಸ್ಯೆ ಬಗೆಹರಿಯುತ್ತದೆ.

ಬೆಳಗಾವಿ ಕೇವಲ ಕರ್ನಾಟದಕ ಭಾಗ ಅμÉ್ಟೀ ಅಲ್ಲ, ಕರ್ನಾಟಕದ ಕೇಂದ್ರಸ್ಥಳ ಎಂದು ಡಾ.ಶಿಬಸವ ಸ್ವಾಮೀಜಿ ಅಂದು ವಾದ ಮಂಡಿಸಿದ್ದರು. ಇಂದಿನ ಮಹಾರಾಷ್ಟ್ರದ ನರ್ಮದಾ ನದಿ ತೀರದವರೆಗೆ ಕನ್ನಡ ಪ್ರದೇಶ ವ್ಯಾಪಿಸಿತ್ತು. ಆ ಹಿನ್ನೆಲೆಯಲ್ಲಿ ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯುವಂತೆ ನಾಗನೂರು ಅಜ್ಜನವರು ಮಾಡಿದ್ದರು ಎಂದು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಸ್ವಾತಂತ್ರ್ಯ ಹೋರಾಟ ಮತ್ತು ಬೆಳಗಾವಿಯಲ್ಲಿ ಕನ್ನಡ ಕಟ್ಟುವುದರಲ್ಲಿ ಡಾ. ಶಿವಬಸವ ಮಹಾಸ್ವಾಮಿಗಳು ಸೇವೆ ಸ್ಮರಣೀಯ. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸ ನಾಗನೂರು ಮಠ ಮಾಡಿದೆ. ವಿಶ್ವಗುರು ಬಸವಣ್ಣನವರು ಶುದ್ಧ ವಿಜ್ಞಾನಿಯಾದರೆ, ಡಾ. ಶಿವಬಸವ ಮಹಾಸ್ವಾಮಿಗಳು ಅನ್ವಯಿಕ ವಿಜ್ಞಾನಿ. ತ್ರಿವಿಧ ದಾಸೋಹದ ಮೂಲಕ ಇವರ ಸೇವೆ ಅಜರಾಮರ ಎಂದು ಕೊಂಡಾಡಿದರು.

ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ, ಮಾಜಿ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ಆಗಮಿಸಿದ್ದರು. ಗದಗನ ಸುಮಲತಾ ಸಂಗಳಾನಮಠ ಆಂಗ್ಲಭಾμÉಯಲ್ಲಿ ಬರೆದಿರುವ ಡಾ. ಶಿವಬಸವ ಸ್ವಾಮೀಜಿ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಎಂ.ಎಸ್. ಚೌಗುಲಾ, ರಮೇಶ ಜಂಗಲ, ಅಡಿವೆಪ್ಪ ಬೆಂಡಿಗೇರಿ, ಪ್ರಭಯ್ಯ ಜಡಿಮಠ, ಪ್ರೇಮಕ್ಕ ಅಂಗಡಿ, ವಿಶ್ವೇಶ್ವರಿ ಹಿರೇಮಠ, ಮರಣೋತ್ತರ ಶರಣಪ್ಪ ಭರಡಿ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು. ಆರ್ಕಿಟೆಕ್ಟ ರಾಹುಲ ಪಾಟೀಲಗೆ ಗೌರವ ಸಮ್ಮಾನ ಮಾಡಲಾಯಿತು. ಎಂಜಿನಿಯರಿಂಗ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮಂಗಳೂರು ರಾಮಕೃμÁ್ಣಶ್ರಮದ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ ಸ್ವಾಗತಿಸಿದರು. ಶ್ರೀ ಪ್ರಭುದೇವ ಪ್ರತಿμÁ್ಠನ ಮಾತೃ ಮಂಡಳಿ ಸದಸ್ಯೆಯರು ವಚನ ಪ್ರಾರ್ಥನೆಗೈದರು. ಡಾ. ಮಹಾಂತ ಸ್ವಾಮೀಜಿ ನಿರೂಪಿಸಿದರು. ಪೆÇ್ರ. ಸಿ.ಜಿ. ಮಠಪತಿ ಶರಣು ಸಮರ್ಪಿಸಿದರು.//////