ಅಕ್ರಮ ಚಟುವಟಿಕೆಯಲ್ಲಿ ಭಾಗಿ: 6 ಆರೋಪಿಗಳನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ ಬೆಳಗಾವಿ ಖಾಕಿ ಪಡೆ

ಬೆಳಗಾವಿ: ನಗರದಲ್ಲಿ ಅಕ್ರಮ ಚಟುವಟಿಕೆಯಲ್ಲಿ ನುಸುಳಿದ 6 ಕಿಡಿಗೇಡಿಗಳನ್ನು ಗಡಿಪಾರು ಮಾಡಿ ಬೆಳಗಾವಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಮಹಮ್ಮದರಫಿ ಮೋದಿನಸಾಬ ತಹಶೀಲ್ದಾರ (68), ಇಜಾರಅಹ್ಮದ ಮಹದಇಸಾಕ್ ನೇಸರಿಕರ (48) , ಜಾನಿ ಜಯಪಾಲ ಲೊಂಡೆ ( 36 ), ಬೈರಗೌಡ ಜ್ಯೋತಿಬಾ ಪಾಟೀ (45) , ನಿತೀನ ಪಾಂಡುರಂಗ ಪೇಡೇಕರ್ (50) ಆರೋಪಿಗಳಿಗೆ ಗಡಿಪಾರು ಮಾಡಿ, ಬಿಸಿ ಮುಟ್ಟಿಸಲಾಗಿದೆ. ನಗರದಲ್ಲಿ ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜಾಟ, ಅಕ್ರಮ ಸರಾಯಿ, ಮುಂತಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಾರ್ಕೇಟ್ ಉಪವಿಭಾಗದ ಮಾರ್ಕೆಟ್ ಠಾಣೆಯಲ್ಲಿ-03, ಮಾಳಮಾರುತಿ ಠಾಣೆಯಲ್ಲಿ-02 ಹಾಗೂ ಶಹಾಪೂರ ಠಾಣೆಯಲ್ಲಿ ಒಬ್ಬ ಆರೋಪಿತನ ಮೇಲೆ ಸಂಬಂಧಿಸಿದ ಠಾಣೆಗಳ ಠಾಣಾಧಿಕಾರಿಗಳ ವರದಿಯನ್ನು ಆಧರಿಸಿ ಎನ್. ಭರಮನಿ, ಎ.ಸಿ.ಪಿ ಮಾರ್ಕೇಟ್ ಉಪವಿಭಾಗ ರವರ ಶಿಫಾರಸ್ಸಿನಂತೆ ರವೀಂದ್ರ ಗಡಾದಿ, ಐಪಿಎಸ್, ಉಪಪೊಲೀಸ್ ಆಯುಕ್ತರು (ಕಾ&ಸು) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಬೆಳಗಾವಿ ಹೊರಡಿಸಿರುತ್ತಾರೆ ಎಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಬೆಳಗಾವಿರವರ ಆದೇಶದಂತೆ ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಿಗೆ ಗಡಿಪಾರು ಮಾಡುವ ಮೂಲಕ ಗಡಿಪಾರು ಆದೇಶವನ್ನು ಜಾರಿಗೊಳಿಸಲಾಗಿದೆ.//////