ಅಧಿವೇಶನ ದಿನದಂದೇ ಮಹಾಮೇಳಾವ್ ಆಯೋಜನೆಗೆ ಎಂಇಎಸ್ ಕರೆ

ಬೆಳಗಾವಿ: ಗಡಿ ವಿವಾದ ತಾರಕಕ್ಕೇರಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿಯಲೆಂದು ಡಿ. 19ರಂದು ಮಹಾಮೇಳಾವ್ ಆಯೋಜನೆಗೆ ಎಂಇಸ್ ಕರೆ ನೀಡಿದೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ಮಹಾಮೇಳವ್ ಆಯೋಜನೆಗೆ ಎಂಇಎಸ್ ಸಿದ್ದತೆ ನಡೆಸಿದ್ದು, ಮಹಾರಾಷ್ಟ್ರದ ನಾಯಕರಿಗೆ ಆಹ್ವಾನ ನೀಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಶರದ್ ಪವಾರ್. ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ್, ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಸೇರಿ ಹಲವರಿಗೆ ಆಹ್ವಾನ ನೀಡಿದೆ ಎನ್ನಲಾಗಿದೆ. ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಸಮಾವೇಶ ನಡೆಸಲು ಎಂಇಎಸ್ ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.
ಶಿವಸೇನೆ ಹಾಗೂ ಎಂಇಎಸ್ ನಾಯಕರನ್ನು ಬೆಳಗಾವಿಗೆ ಆಹ್ವಾನಿಸಿ ಭಾಷಣ ಮಾಡಿಸುವುದು ಹಾಗೂ ಗಡಿ ವಿವಾದವನ್ನು ಇನ್ನಷ್ಟು ಕೆಣಕಲು ಯೋಜನೆ ಮಾಡಲಾಗಿದೆ ಎನ್ನಲಾಗಿದೆ.//////