Belagavi News In Kannada | News Belgaum

ರಸ್ತೆ ಮರು ಡಾಂಬರೀಕರಣ ಕಾವiಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ : ದಿನಾಂಕ 09.12.2022 ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕರವರು 1 ಕೊಟಿ 50 ಲಕ್ಷಗಳ ಮಹಾನಗರ ಪಾಲಿಕೆಯ ವಿಶೇಷ ಅನುದಾನದಡಿಯಲ್ಲಿ ನಗರದ ಲಕ್ಷ್ಮಿ ಕಾಂಪ್ಲೇಕ್ಸ್ ದಿಂದ ಡ್ಯಾಂಬ್ರೋ ಎ.ಪಿ.ಎಮ್.ಸಿ ರಸ್ತೆ ವರೆಗಿನ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ನೆಹರು ನಗರದ ಬಸವಣ್ಣ ಮಹಾದೇವ ಮಂದಿರದ ಹತ್ತಿರದಲ್ಲಿ ಅವರ ಅಮೃತ ಹಸ್ತದಿಂದ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು ಮಹಾನಗರ ಪಾಲಿಕೆಯ 1 ಕೋಟಿ 50 ಲಕ್ಷಗಳ ವಿಶೇಷ ಅನುದಾನದಡಿಯಲ್ಲಿ ನಗರದ ಮುಖ್ಯ ರಸ್ತೆಯಾಗಿರುವ ಲಕ್ಷ್ಮಿ ಕಾಂಪ್ಲೆಕ್ಸ್ ನಿಂದ ಡ್ಯಾಂಬ್ರೋ ಎ.ಪಿ.ಎಮ್.ಸಿ ರಸ್ತೆ ವರೆಗೆ ರಸ್ತೆಯು ತುಂಬಾ ಹದಗೆಟ್ಟಿರುವುದನ್ನು ಮನಗಂಡು ಇಲ್ಲಿನ ಸ್ಥಳೀಯರ ಹಲವಾರು ವರ್ಷಗಳ ಬೇಡಿಕೆಯ ಅನುಸಾರ ಈ ಡಬಲ್ ರಸ್ತೆಯನ್ನು ರಸ್ತೆ ಮರು ಡಾಂಬರೀಕರಣ ಮಾಡುವ ಕೆಲಸವನ್ನು ಕೈಗೆತ್ತಿಕೊಂಡು ಸ್ಥಳೀಯ ಮುಖಂಡರುಗಳು ಹಾಗೂ ನಗರ ಸೇವಕರೊಂದಿಗೆ ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆ ಎಂದರು. ನಗರದ ಮುಖ್ಯ ರಸ್ತೆಯಾಗಿರುವುದರಿಂದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕೆಂದು ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರ ಸೇವಕರಾದ ರೇಷ್ಮಾ ಪಾಟೀಲ, ಸವಿತಾ ಕಾಂಬಳೆ, ರೂಪಾ ಚಿಕ್ಕಲದಿನ್ನಿ, ಶ್ರೇಯಸ ನಾಕಾಡಿ, ಸಂದೀಪ ಜಿರಗಿಹಾಳ, ಮುಖಂಡರುಗಳಾದ ಮಹಾದೇವ ರಾಠೋಡ, ಪ್ರವೀಣ ಪಾಟೀಲ, ಬೆಳಗಾವಿ ಉತ್ತರ ಮಂಡಳ ಅದ್ಯಕ್ಷ ವಿಜಯ ಕೊಡಗನೂರ, ಅನಿಲ ಹುಕ್ಕೇರಿ, ಯೋಗೇಶ ತರಳೆ, ಗಜು ಮಿಸಾಳೆ, ಅಶೋಕ ಥೋರಾಟ, ರಾಹುಲ ಬಡಸಕರ, ಮಲ್ಲಿಕಾರ್ಜುನ ಸ್ವಾಮಿ, ವಿನೋದ ಲಂಗೋಟಿ, ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಚಿನ ಕಾಂಬಳೆ, ಗುತ್ತಿಗೆದಾರ ವಿಜಯ ಧಾಮಣೇಕರ ಹಾಗೂ ಅಲ್ಲಿನ ಸ್ಥಳಿಯರು ಉಪಸ್ಥಿತರಿದ್ದರು.//////