Belagavi News In Kannada | News Belgaum

ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ ಎಂದ ಲಕ್ಷ್ಮಣ ಸವದಿ

ಚಿಕ್ಕೋಡಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರವಗಿ ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ಗಡಿಕ್ಯಾತೆ ತೆಗೆದ ಎಂಇಎಸ್ ಸಂಪೂರ್ಣ ಸತ್ತು ಹೋಗಿದೆ. ಅದಕ್ಕೆ ಜೀವ ಕೊಡಲು ಮರಾಠಿ ಪುಂಡರಿಗೆ ಪುಷ್ಟಿ ಕೊಡಲಾಗುತ್ತಿದೆ. ಈಗಾಗಲೇ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಸಾಂಪ್ರದಾಯಿಕ್ವಾಗಿ ಮರಾಠ ಸಮಾಜ ಬಿಜೆಪಿ ಪರವಾಗಿದೆ ಎಂದರು.

ಮರಾಠ ಸಮಾಜದ ರಕ್ತದಲ್ಲಿ ಹಿಂದುತ್ವ ಇದೆ ಹಿಂದುತ್ವ ಎದ್ದು ಕುಣಿಯುತ್ತಿದೆ. ಈ ಬಾರಿ ಮರಾಠಾ ಸಮಾಜ ಇರುವಲ್ಲಿ ಮತ್ತು ಮರಾಠಿಗರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಎಂಇಎಸ್‌ಗೆ ಶೂನ್ಯ ಸಂಪಾದನೆ ಮಾಡಿ ಉತ್ತರ ಕೊಡಲಿದ್ದೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.//////