Belagavi News In Kannada | News Belgaum

ರಾಷ್ಟçಮಟ್ಟದ ಪುಟ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ಲಿಂಗರಾಜ ಪಿಯು ವಿದ್ಯಾರ್ಥಿನಿಯರು

ರಾಷ್ಟçಮಟ್ಟದ ಪುಟ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾದ ಲಿಂಗರಾಜ ಪಿಯು ವಿದ್ಯಾರ್ಥಿನಿಯರು
ಬೆಳಗಾವಿ ೧೦: ಬಳ್ಳಾರಿಯಲ್ಲಿ ೦೩/೧೨/೨೦೨೨ ಮತ್ತು ೦೪/೧೨/೨೦೨೨ ರಂದು ಜರುಗಿದ ಪದವಿಪೂರ್ವ ವಿದ್ಯಾರ್ಥಿಗಳ ೨೦೨೨-೨೩ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ ಪಿಯು ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಕುಮಾರಿ ಸಮೃದ್ಧಿ ಕುಡಚಿ, ಕುಮಾರಿ ತನ್ವಿ ಗಾವಡೆ, ಕುಮಾರಿ ಧನಶ್ರೀ ಕದಂ ಮತ್ತು ಕುಮಾರಿ ಸಯಾಲಿ ದೇಸಾಯಿ ಅವರು ಫುಟ್‌ಬಾಲ್‌ನಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಆ ಮೂಲಕ ಅವರು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ. ಅತ್ಯುತ್ತಮ ಗೋಲ್ ಕೀಪರ್ ಆಗಿ ಸಮೃದ್ಧಿ ಕುಡಚಿ ಆಯ್ಕೆಯಾಗಿದ್ದಾರೆ. ಅವರ ಗಮನಾರ್ಹ ಸಾಧನೆಗಾಗಿ ಕೆಎಲ್‌ಇ ಆಡಳಿತ ಮಂಡಳಿ ನಿರ್ದೇಶಕರಾದ ವಾಯ್.ಎಸ್.ಪಾಟೀಲ, ಬಿ.ಆರ್.ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಎಂ.ಸಿ.ಕೊಳ್ಳಿ, ಡಾ.ಎಂ.ಟಿ.ಕಾAಬಳೆ, ಪಿಯು ಪ್ರಾಂಶುಪಾಲರಾದ ಪ್ರೊ.ಗಿರಿಜಾ ಹಿರೇಮಠ, ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಅಭಿನಂದಿಸಿದ್ದಾರೆ.