Belagavi News In Kannada | News Belgaum

ಬೆಳೆ ಕಟಾವು ಪ್ರಯೋಗ-ಪಾರದರ್ಶಕತೆ ಕಾಪಾಡಲು ತಂತ್ರಾಂಶ ಬಳಕೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ 2016-17 ಸಾಲಿನಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಯಡಿ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲು ಬೆಳೆ ಕಟಾವು ಪ್ರಯೋಗಗಳನ್ನು ಹೋಬಳಿ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ಕೈಗೊಳಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳಲು ಎನ್.ಆಯ.ಸಿ ಸಹಯೋಗದೊಂದಿಗೆ ಅಭಿವೃದ್ದಿüಪಡಿಸಲಾದ ಮೊಬೈಲ್ ಆಪ್ ತಂತ್ರಾಂಶವನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಕರ್ನಾಟಕ ರೈತ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಬೆಳೆ ಕಟಾವು ಪ್ರಯೋಗಗಳ ಸನ್ 2022-23ನೇ ಸಾಲಿನ ಹಿಂಗಾರು ಹಂಗಾಮಿನ ಯೋಜನಾ ಪಟ್ಟಿಯನ್ನು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ(ಡಿ.13) ಪ್ರಪ್ರಥಮವಾಗಿ ಎಲ್ಲ ತಾಲೂಕಿನ ರೈತ ಮುಖಂಡರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಡಿದರು.

ಕೃಷಿ ಆಯುಕ್ತರು ಬೆಂಗಳೂರು ಇವರ ಅಧಿಸೂಚನೆಯಂತೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿರ್ದೇಶನದಂತೆ ಋತುವಾರು ಯೋಜನಾಪಟ್ಟಿಯನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗುತ್ತಿತ್ತು.

ಆದರೆ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ 33 ಆಹಾರ ಮತ್ತು ಆಹರೇತರ ಬೆಳೆಗಳಿಗೆ ಮುಂಗಾರು ಹಂಗಾಮಿಗೆ 6724, ಹಿಂಗಾರು ಹಂಗಾಮಿಗೆ 4740 ಹಾಗೂ ಬೇಸಿಗೆ ಹಂಗಾಮಿಗೆ 280 ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳಲಾಗುತ್ತಿದೆ ಎಂದು ತಿಳಿಸಿದರು.

ಸದರಿ ಬೆಳೆ ಕಟಾವು ಪ್ರಯೋಗಗಳ ಯೋಜನೆ ಕೈಗೊಳ್ಳುವ ಕ್ರಿಯೆಯನ್ನು ಹಂತ ಹಂತವಾಗಿ ರೈತರಿಗೆ ಮನವರಿಕೆ ಮಾಡುತ್ತಾ ಕೃಷಿ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆಯಂತೆ ಸಂರಕ್ಷಣೆ ವೆಬ್ ಪೊರ್ಟಲ್‍ನಲ್ಲಿ ವಿಮಾ ಘಟಕವಾರು ಬೆಳೆಗಳು ಮ್ಯಾಪಿಂಗ ಮಾಡಲಾಗಿರುತ್ತದೆ.
ಅನಿಯಮಿತವಾಗಿ ಗ್ರಾಮ ಹಾಗೂ ಸರ್ವೇ ನಂಬರಗಳ ಆಯ್ಕೆಯ ಪ್ರಕಿಯೆಯನ್ನು ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಜಿಲ್ಲೆಯ ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ಪಂಚಾಯತ ರಾಜ್ ಇಲಾಖೆಯ ಮೂಲ ಕಾರ್ಯಕರ್ತರಿಗೆ ಹಂಚಿಕೆ ಮಾಡುವ ಕುರಿತು ವಿವರಿಸಿದರು.
ಸದರಿ ಯೋಜನಾ ಪಟ್ಟಿಯನ್ನು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದೆ ಎಂಬುವುದನ್ನು ರೈತರಿಗೆ ಮನವರಿಕೆ ಮಾಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ರೇಖಾ ಶೆಟ್ಟರ, ಕೃಷಿ ಇಲಾಖೆಯ ಜಂಟಿ ನಿದೇಶಕ ಶಿವನಗೌಡಾ.ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರದ ಎಂ.ಮುರಗೋಡ, ತಾಲೂಕಾ ಮಟ್ಟದ ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ ರಾಜ್ ಹಾಗೂ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.//////