ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಮ, ಸ್ಮಾರ್ಟ್ ಎಜ್ಯುಕೇಶನ್ ಸಿಸ್ಟಮ್ ಜಾರಿ ಬೆಳಗಾವಿ ಉತ್ತಮ ಮತಕ್ಷೇತ್ರದಲ್ಲಿ ಒಟ್ಟು ಏಳು ಸರಕಾರಿ ಸ್ಮಾರ್ಟ್ ಎಜ್ಯುಕೇಶನ್ ಸಿಸ್ಟಮ್ : ಶಾಸಕ ಅನಿಲ ಬೆನಕೆ

ಸರಕಾರಿ ಶಾಲೆಗಳು ಸಹ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮೂಲಕ ಸರಕಾರಿ ಶಾಲೆಯಲ್ಲಿಯು ಸಹ ಟಿಜಿಟಲ್ ಎಜ್ಯುಕೇಶನ್ ಪ್ರಾರಭಿಸಲಾಗಿದೆ. ರಾಮತೀರ್ಥನಗರ, ಕಣಬರ್ಗಿ ಮಹಾಂತೇಶ ನಗರ ಮತ್ತು ಖಂಜರ ಗಲ್ಲಿ ಸರಕಾರಿ ಸ್ಕೂಲ್ ಸೇರಿದಂತೆ ಒಟ್ಟು ಏಳು ಸರಕಾರಿ ಸ್ಕೂಲ್ ಗಳಿಗೆ ಸ್ಮಾರ್ಟ್ ಎಜ್ಯುಕೇಶನ್ ಸಿಸ್ಟಮ್ ಪ್ರಾರಂಬಿಸಲಾಗಿದೆ.
ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಾದ್ಯಾಂತ ಸ್ಮಾರ್ಟ್ ಎಜ್ಯುಕೇಶನ್ ಸಿಸ್ಟಮ್ ಪ್ರಾರಂಭಿಸಲಾಗುವುದು ಎಂದರು.
ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಶಾಲೆಗಳು ಪ್ರಾರಂಭವಾಗಿದ್ದು ಸರ್ಕಾರಿ ಶಾಲೆಗಳು ಮುಂಚೂನಿಯಲ್ಲಿ ಬರಲಿವೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.
ನಗರದ ಖಂಜರ ಗಲ್ಲಿ ಸರಕಾರಿ ಮಾದರಿ ಉರ್ದು ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಮಾರ್ಟ್ ಎಜ್ಯುಕೇಶನ್ ಸಿಸ್ಟಮ್, ಹಾಗೂ ಕುಡಿಯುವ ನೀರಿನ ವ್ಯವಸ್ಥೆ ವಿಕ್ಷಿಸಲು ಬಂದ ಬೆನಕೆ ಅವರು ಈ ಸ್ಕೂಲ್ ನಲ್ಲಿ ಎಂಟನೇ ತರಗತಿಯ ವರೆಗೆ ಮಾತ್ರ ಶಿಕ್ಷಣವಿದ್ದು, 9 ಮತ್ತು 10 ನೇ ತರಗತಿ ಕಲಿಯಲು ಹೆಣ್ಣು ಮಕ್ಕಳ ಸರ್ದಾರ ಸ್ಕೂಲ್ ಗೆ ಹೋಗಬೇಕಿತ್ತು. ಇಗ ಅದನ್ನು ತಪ್ಪಿಸಿ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ಕಲಿಯಬಹುದು ಎಂದರು.
ಕ್ಲಾಸ್ ರೂಂನಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಗಳು ಇಲ್ಲ, ಸ್ವಲ್ಪ ದಿನದಲ್ಲಿ ಬೆಂಚ್ ಗಳನ್ನು ತರಿಸುತ್ತೇನೆ. ಸ್ಕೂಲ್ ಕಟ್ಟಡವು ಬಹಳ ಹಳೆಯದಾಗಿದ್ದು, ಪಿ.ಡಬ್ಲೂ.ಡಿ ಇಂಜಿನಿಯರ್ ನ್ನು ಕರೆಯಿಸಿ ಕಟ್ಟಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸುರಕ್ಷತೆ ಇದೆಯಾ ಎನ್ನುವುದನ್ನು ಪರಿಕ್ಷಿಸಿ ಹೊಸ ಕಟ್ಟಡದ ಯೋಜನೆ ರೂಪಿಸುತ್ತೇನೆ ಎಂದರು.
ಶಾಲೆಯು ಹೆಣ್ಣು ಮಕ್ಕಳು ಶಾಲೆಯಾಗಿದ್ದು ಮುಖ್ಯವಾಗಿ ಶೌಚಾಲಯ ಸಮಸ್ಯೆ ಇದ್ದು, ಸರಕಾರದಿಂದ ಆರು ಲಕ್ಷ ರೂಪಾಯಿ ಹಣ ಮಂಜೂರಾಗಿದ್ದು ಹೆಚ್ಚಿನ ಹಣವನ್ನು ನಾನಯ ನೀಡುತ್ತೇನೆ ಎಂದರು.
ಎಸ್.ಡಿ.ಎಂ.ಸಿ ಯವರು ಶಾಲೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕು. ಯಾವುದೇ ಕುಂದು ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.//////