Belagavi News In Kannada | News Belgaum

ಅಂಬೇಡ್ಕರ ನಗರ ರಹವಾಸಿಗಳಿಂದ ಶಾಸಕ ಅನಿಲ ಬೆನಕೆ ಅವರಿಗೆ ಸನ್ಮಾನ

ಬೆಳಗಾವಿ  :ದಿನಾಂಕ 12.12.2022 ರಂದು ಬೆಳಗಾವಿ ನಗರದ ಅಂಬೇಡ್ಕರ ನಗರದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರಿಗೆ ಸನ್ಮಾನ್ಯ ಕಾರ್ಯಕ್ರಮ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರದೇಶದಲ್ಲಿ ರಸ್ತೆ, ಗಟಾರು, ಬೀದಿ ದೀಪ, ನೀರಿನ ವ್ಯವಸ್ಥೆ, ಸಮುದಾಯ ಭವನ ಸೇರಿದಂತೆ ಹಲವಾರು ಅಭಿವೃಧ್ದಿ ಕಾಮಗಾರಿಗಳನ್ನು ಶಾಸಕರು ಮಾಡಿದ್ದು, ಸದ್ಯ ಕೆಲವು ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಶಾಸಕರ ಅವಧಿಯಲ್ಲಿ ಅಂಬೇಡ್ಕರ ನಗರದಲ್ಲಿ ಹಲವಾರು ಅಭಿವ್ರಧ್ದಿ ಕಾರ್ಯಗಳು ಆಗಿರುವುದರಿಂದ ಸ್ಥಳಿಯ ಮುಖಂಡರುಗಳು ಮತ್ತು ರಹವಾಸಿಗಳು ಶಾಸಕ ಅನಿಲ ಬೆನಕೆ ಅವರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸುವುದರೊಂದಿಗೆ ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ ನಗರದ ಮುಖಂಡರು, ಪಂಚರು ಹಾಗೂ ಅಂಬೇಡ್ಕರ ನಗರ ರಹವಾಸಿಗಳು ಉಪಸ್ಥಿತರಿದ್ದರು.