ಚಿಕ್ಕ ಬೆಳ್ಳಿಕಟ್ಟಿಯಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ನಿರ್ಮಾಣ

ಬೈಲಹೊಂಗಲ – ತಾಲೂಕಿನ ಚಿಕ್ಕ ಬೆಳ್ಳಿಕಟ್ಟಿ ಗ್ರಾಮದ ನಿವಾಸಿ ಸಂಗಮ್ಮ ಹೊಂಗಲ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸದ ನೇತೃತ್ವದಲ್ಲಿ ವಾತ್ಸಲ್ಯ ಎನ್ನುವ ಹೊಸ ಮನೆಯನ್ನು ನಿರ್ಮಿಸಿ ಮಂಗಳವಾರ ಉದ್ಘಾಟಿಸಿ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಮಯಿ ಕಾರ್ಯಕ್ರಮಡಿಯಲ್ಲಿ ಧಾರವಾಡದ ಪ್ರಾದೇಶಿಕ ಕಚೇರಿಯ ನಿರ್ದೇಶಕ ದುಗ್ಗೆಗೌಡ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ 40 ಕಾರ್ಯಕ್ರಮಗಳನ್ನು ಅನುμÁ್ಠನ ಮಾಡುತ್ತಿದ್ದು ಡಾ. ಹೆಗ್ಗಡೆ ದಂಪತಿಗಳ ಆಶಯದಂತೆ ಅಸಹಾಯಕರಿಗೆ ದಿಕ್ಕಿಲ್ಲದವರಿಗೆ ದೇವರೇ ಗತಿ ಎನ್ನುವಂತೆ ಸಂಗಮ್ಮ ಅವರಗೆ ಧರ್ಮಸ್ಥಳ ಯೋಜನೆಯ ಸಂಸ್ಥೆಯು ನೆರವಿಗೆ ಬಂದು ಮೂಲ ಸೌಕರ್ಯ ಹೊಂದಿದ ವಾತ್ಸಲ್ಯದ ಮನೆಯನ್ನು ರಚಿಸಿ ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ, ಕಿತ್ತೂರು ತಾಲೂಕಾ ಯೋಜನಾಧಿಕಾರಿ ಪ್ರಶಾಂತ ನಾಯ್ಕ, ಬೈಲಹೊಂಗಲ ತಾಲೂಕಾ ಯೋಜನಾಧಿಕಾರಿ ವಿಜಯಕುಮಾರ್ ಪಿ, ಪ್ರಾದೇಶಿಕ ಕಚೇರಿ ಸಮನ್ವಯ ಅಧಿಕಾರಿ ಗೀತಾ ಎಸ್, ಗ್ರಾ. ಪಂ. ಸದಸ್ಯ ಬಸವರಾಜ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ ರಾಯನಾಳ, ಸಮನ್ವಯ ಅಧಿಕಾರಿ ಅಂಜನಾ, ಒಕ್ಕೂಟದ ಅಧ್ಯಕ್ಷೆರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ದೀಪಾ ಸ್ವಾಗತಿಸಿ, ನಿರೂಪಿಸಿದರು.//////