ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಟ್ರ್ಯಾಕಿಂಗ್ ಶಿಬಿರಕ್ಕೆ ಚಾಲನೆ

ಬೆಳಗಾವಿ: ನಮ್ಮ ಯುವ ಜನಾಂಗವು ರಾಷ್ಟ್ರದ ಸಂಪತ್ತಾಗಿದ್ದು, ದೇಶದ ಸಂಸ್ಕೃತಿ ಪರಂಪರೆ ಹಾಗೂ ಪರಿಸರವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಅದನ್ನು ಪೋಷಿಸಿ ಬೆಳೆಸುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ಎಸ್ ಶ್ರೀನಿವಾಸ ಹೇಳಿದರು.
ಜಾದವ್ ನಗರದಲ್ಲಿ ಬೆಳಗಾವಿ ಎನ್ ಸಿ ಸಿ ಗ್ರೂಪ್ ಅಡಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಟ್ರ್ಯಾಕಿಂಗ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಡಿ. 15 ದಿಂದ ಡಿ. 22ರವರೆಗೆ ಜರುಗುತ್ತಿರುವ ಈ ಶಿಬಿರದಲ್ಲಿ ಯುವಕರಲ್ಲಿ ಸಾಹಸ ಪ್ರವೃತ್ತಿಯನ್ನು ಮೂಡಿಸಲಿದೆ. ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವುದು ಹಾಗೂ ಪರಿಸರದ ಕಾಳಜಿಯ ಬಗ್ಗೆ ಜಾಗೃತಿಯನ್ನು ಹುಟ್ಟು ಹಾಕುವುದು ಈ ಶಿಬಿರದ ಉದ್ದೇಶವಾಗಿದೆ ಎಂದರು.
ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಸಮಯ ಪಾಲನೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.
26 ಕರ್ನಾಟಕ ಬೆಟಾಲಿಯನ್ ಕಮೊಂಡಿಂಗ್ ಆಫೀಸರ್ ಚಾರಣ ಶಿಬಿರದ ಕಮಾಂಡೆಂಟ್ ಕರ್ನಲ್ ಎಸ್ ದರ್ಶನ ಮಾತನಾಡಿ, ಎನ್ ಸಿಸಿ ಕೆಡೆಟ್ಗಳಲ್ಲಿ ಸಾಹಸಮಯ ಮತ್ತು ಪರಿಶೋಧನಾತ್ಮಕ ಮನೋಭಾವವನ್ನು ಬೆಳೆಸುವುದು, ದೈಹಿಕ ಸಾಮರ್ಥ್ಯ, ಸಹಿಷ್ಣುತೆ, ಆತ್ಮ ವಿಶ್ವಾಸ, ತಂಡದ ಮನೋಭಾವ ಮತ್ತು ಉತ್ಸಾಹವನ್ನು ಬೆಳೆಸಿಸುವುದು ಈ ಚಾರಣದ ಉದ್ದೇಶವಾಗಿದೆ ಎಂದರು.
ಈ ಶಿಬಿರದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ್, ತೆಲಂಗಾಣ, ಪಾಂಡಿಚೆರಿ, ತಮಿಳುನಾಡು, ಕೇರಳ, ಗುಜರಾತ್, ಲಕ್ಷದೀಪ 510 ಎನ್ ಸಿ ಸಿ ಕ್ಯಾಡೆ ಟ್ ಗಳು ಪಾಲ್ಗೊಂಡಿದ್ದಾರೆ.//////