Belagavi News In Kannada | News Belgaum

ಬೆಳಗಾವಿಯಿಂದ ಸುಮಾರು 100 ಕಿಮೀ ಇರುವ ಅಥಣಿಗೆ ಮುಖ್ಯಮಂತ್ರಿಗಳು ತಮ್ಮ ಐಷಾರಾಮಿ ಕಾರಿನಲ್ಲಿಯೇ ಹೋಗಬಹುದಿತ್ತು, ಅಧ್ಯಾಕೊ ಗೊತ್ತಿಲ್ಲ ಸಮೀಪ ಇರುವ ಈ ಸ್ಥಳಕ್ಕೆ ಹೆಲಿಕ್ಯಾಪ್ಟರ್ ತರಿಸಿ ಪ್ರಯಾಣ

ಬೆಳಗಾವಿಯಲ್ಲಿ ಇಂದು ಸೋಮವಾರ ಚಳಿಗಾಲದ ಅಧಿವೇಶನದ ಮೊದಲ ದಿನವಾಗಿದ್ದು, ಸುವರ್ಣ ವಿಧಾನ ಸೌಧದಲ್ಲಿ ಎರಡೂ ಸದನಗಳಲ್ಲಿ ಸಂತಾಪ ಸೂಚನಾ ಭಾಷಣಗಳು ನಡೆದವು.

ಅದಾದ ನಂತರ ಕೆಲ ವಿಷಯಗಳ ಚರ್ಚೆ ನಡೆದು, ಮಧ್ಯಾಹ್ನ 1 30ರ ಸುಮಾರಿಗೆ ಮುಖ್ಯಮಂತ್ರಿಗಳು ಅಥಣಿ ಶಾಸಕರಾದ ಮಹೇಶ ಕುಮಟಳ್ಳಿ ಅವರ ಮಗಳ ಮದುವೆಗೆ ಹೆಲಿಕಾಪ್ಟರ್ ಮೂಲಕ ತೆರಳಿದರು.

 

ಬೆಳಗಾವಿಯಿಂದ ಸುಮಾರು 100 ಕಿಮೀ ಇರುವ ಅಥಣಿಗೆ ಮುಖ್ಯಮಂತ್ರಿಗಳು ತಮ್ಮ ಐಷಾರಾಮಿ ಕಾರಿನಲ್ಲಿಯೇ ಹೋಗಬಹುದಿತ್ತು, ಅಧ್ಯಾಕೊ ಗೊತ್ತಿಲ್ಲ ಸಮೀಪ ಇರುವ ಈ ಸ್ಥಳಕ್ಕೆ ಹೆಲಿಕ್ಯಾಪ್ಟರ್ ತರಿಸಿ ಪ್ರಯಾಣ ಬೆಳೆಸಿದರು.

 

ಆದರೆ ಕೆಲ ಸಾಮಾನ್ಯ ಜನರು ಸರ್ಕಾರದ ಹಣವನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಉಪಯೋಗ ಮಾಡಿದರೆ ಚೆಂದ ಎಂಬ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.