Belagavi News In Kannada | News Belgaum

ಬೆಳಗಾವಿ ಸುವರ್ಣಸೌಧದಲ್ಲಿಎರಡು ನಾಗರ ಹಾವುಗಳು ಪತ್ತೆ

ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಆರಂಭವಾಗಲಿದ್ದು, ಆರಂಭದ ದಿನವೇ ಸುವರ್ಣ ಸೌಧದಲ್ಲಿ ಎರಡು ನಾಗರ ಹಾವುಗಳು ಪತ್ತೆಯಾಗಿವೆ.
ಸುವರ್ಣ ಸೌಧದ ಮುಖ್ಯ ದ್ವಾರದ ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿಎರಡು ನಾಗರ ಹಾವುಗಳು ಹಾವುಗಳು ಅಡಗಿ ಕುಳಿತಿದ್ದವು. ಹಾವುಗಳನ್ನ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ.
ಉರಗ ರಕ್ಷಕನನ್ನ ಸ್ಥಳಕ್ಕೆ ಕರೆಸಿ ಹಾವುಗಳನ್ನ ರಕ್ಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಾವುಗಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವಂತೆ ಈಗಾಗಲೇ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.//////