ಹಲವು ಬೇಡಿಕೆಗಳನ್ನು ಮಂಡಿಸಿ, ಧರಣಿ ನಡೆಸುತ್ತಿರುವ ರೈತ ಬಂಧುಗಳನ್ನು ಭೇಟಿಯಾಗಿ ಮನವಿ ಪತ್ರ ವನ್ನು ಸ್ವೀಕರಿಸಿದರು.

ಬೆಳಗಾವಿ :- ಬೆಳಗಾವಿ ನಗರದ ಸುವರ್ಣ ವಿಧಾನ ಸೌಧದಲ್ಲಿ ಇಂದು ಆರಂಭವಾದ ಹತ್ತು ದಿನಗಳ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ, ಹಲವು ಬೇಡಿಕೆಗಳನ್ನು ಮಂಡಿಸಿ, ಧರಣಿ ನಡೆಸುತ್ತಿರುವ ರೈತ ಬಂಧುಗಳನ್ನು ಭೇಟಿಯಾಗಿ ಮನವಿ ಪತ್ರ ವನ್ನು ಸ್ವೀಕರಿಸಿದರು.
ರೈತರ ಅಹವಾಲುಗಳನ್ನು ಆಲೈಸಿ, ಬೇಡಿಕೆಗಳನ್ನು ಪರಿಶೀಲಿಸುವ ಬಗ್ಗೆ ಭರವಸೆ ನೀಡಿದ್ದಲ್ಲದೆ, ಧರಣಿ ಹಿಂಪಡೆಯುವಂತೆ, ವಿನಂತಿಸಿದರು.
ಪೊಲೀಸ್ ಆಯುಕ್ತ ಶ್ರೀ ಬೋರಲಿಂಗಯ್ಯ ಸೇರಿದಂತೆ, ಹಿರಿಯ ಪೊಲೀಸ್ ಅಧಿಕಾರಿಗಳೂ ಉಪಸ್ತಿತರಿದ್ದರು.