Belagavi News In Kannada | News Belgaum

ಸಂಜಯ್ ರಾವತ್ ದೇಶ ದ್ರೋಹಿ ಎಂದ ಸಿಎಂ ಬೊಮ್ಮಾಯಿ

ಬೆಳಗಾವಿ: ಸಂಜಯ್ ರಾವತ್ ದೇಶ ದ್ರೋಹಿ. ರಾವತ್​ ಚೀನಾ ಏಜೆಂಟ್​ ಇರಬಹುದೆಂಬ ಅನುಮಾನ ಬರುತ್ತೆ. ಸಂಜಯ್ ರಾವತ್​ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರು ಚೈನಾ ತರ ಬಂದರೆ, ನಮ್ಮ ಕನ್ನಡಿಗರು ಅದನ್ನು ಭಾರತೀಯ ಸೇನೆಯಂತೆ ಹಿಮ್ಮೆಟ್ಟಿಸುತ್ತಾರೆ. ಮೊದಲು ಅವರ ರಾಜ್ಯದಲ್ಲಿರುವ ಜನರನ್ನು ರಕ್ಷಣೆ ಮಾಡಲಿ ಎಂದರು.
ಇಂತಹ ಉದ್ಧಟತನ ಹೇಳಿಕೆ ಕೊಟ್ಟರೆ ಪ್ರಯೋಜನವೂ ಇಲ್ಲ. ರಾಜಕೀಯದ ಸಲುವಾಗಿ ಅವರು ಈ ರೀತಿ ಮಾತಾಡಿದ್ದಾರೆ. ಅದನ್ನು ಕಾರ್ಯಗತ ಮಾಡಲು ಸಾಧ್ಯವಿಲ್ಲ. ಒಂದು ರಾಜ್ಯ ಇನ್ನೊಂದು ರಾಜ್ಯಗಳ ಸಂಬಂಧ ಇದ್ದೇ ಇರುತ್ತದೆ ಎಂದರು.
ಈಗಾಗಲೇ ಗಡಿ ವಿವಾದ ಸುಪ್ರೀಂನಲ್ಲಿದೆ. ಅವರಿಗೆ ಅಷ್ಟು ಶಕ್ತಿ ಇದ್ದರೆ ಅಲ್ಲಿ ಫೈಟ್ ಮಾಡಲಿ. ನಮಗೆ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ನಮ್ಮ ವಾದ ಪ್ರಬಲವಾಗಿದೆ. ಏನೇ ಇದ್ದರೂ ನಮ್ಮ ವಾದವನ್ನು ಮಂಡಿಸುತ್ತೇವೆ ಎಂದರು.///////