Belagavi News In Kannada | News Belgaum

ರಾಜ್ಯ ಸರ್ಕಾರದಿಂದ ಮತ್ತೆ ಕೊರೊನಾ ಹೈ ಅಲರ್ಟ್

ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಆತಂಕ ಮಾಡುವುದು ಬೇಡ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಎಎಲ್​​ಐ, ಸಾರಿ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡುವ ನಿರ್ಧಾರ ಮಾಡಲಾಗಿದೆ. ವಿಶೇಷ ಎಂದರೇ, ಒಳಾಂಗಣದಲ್ಲಿ ಜನರು ಮಾಸ್ಕ್ಧರಿಸುವುದು ಕಡ್ಡಾಯ ಮಾಡಲು ಸಲಹೆ ನೀಡಿದ್ದೇವೆ. ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಎಷ್ಟು ಪ್ರಮಾಣದಲ್ಲಿ ಕೊರೊನಾ ಟೆಸ್ಟ್​ ಮಾಡ್ಬೇಕು ಅಂತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಳಾಂಗಣದಲ್ಲಿ ಮಾಸ್ಕ್​ ಧರಿಸಲು ಸಲಹೆ: ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಅಕ್ಸಿಜನ್ ಪ್ಲಾಂಟ್​ಗಳನ್ನು ಸರಿಯಾದ ರೀತಿಯಲ್ಲಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಸಿಜನ್​ ಬಗ್ಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಬೆಡ್​​ಗಳನ್ನು ಕೊರೊನಾಗೆ ಮೀಸಲು ಮಾಡಲು ಸೂಚನೆ ನೀಡಲಾಗಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ಹಂಚಿಕೊಂಡು ಕ್ರಮವಹಿಸಲು ಸೂಚನೆ ನೀಡುತ್ತೇವೆ ಎಂದರು.
ಬೂಸ್ಟರ್​ ಡೋಸ್​ ಪಡೆದುಕೊಳ್ಳಲು ಮನವಿ: ಮೂರನೇ ಡೋಸ್​ ಲಸಿಕೆಗೆ ವಿಶೇಷ ಒತ್ತು. ಕೊರೊನಾ ಎರಡನೇ ಅಲೆ ಬಳಿಕ ಕೊರೊನಾ ಕಡಿಮೆಯಾಗಿದ್ದ ಕಾರಣ ಬೂಸ್ಟರ್ ಡೋಸ್​ ಕಡಿಮೆ ತೆಗೆದುಕೊಂಡಿದ್ದಾರೆ. ಆದ್ದರಿಂದ ವಿಶೇಷ ಗಮನಹರಿಸಿ ಮೂರನೇ ಡೋಸ್​​ ನೀಡಲು ವ್ಯಾಕ್ಸಿನೇಷನ್​ ಕ್ಯಾಂಪ್​​ ಮಾಡಲು ಸೂಚನೆ, ಶೇ.100 ಸಾಧನೆ ಮಾಡಲು ಸಿಎಂ ಹೇಳಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕೊರೊನಾ ಲಸಿಕೆ ಪೂರೈಕೆ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.///////