Belagavi News In Kannada | News Belgaum

ಕೋವಿಡ್‌ಗೆ ಹೆದರುವ ಅಗತ್ಯವಿಲ್ಲ, ಮಾಸ್ಕ್‌ ಕಡ್ಡಾಯವಿಲ್ಲ : ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಕೋವಿಡ್‌-19 ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಜನತೆ ಕೋವಿಡ್‌ ಕುರಿತು ಅನಗತ್ಯ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಮಾಸ್ಕ್‌ ಧರಿಸುವಿಕೆ ಕಡ್ಡಾಯವಲ್ಲ.
ಆದರೆ ಮಾಸ್ಕ್‌ ಧರಿಸಿ, ಕೋವಿಡ್‌ ಮುನ್ನೆಚ್ಚರಿಕೆ ಪಾಲಿಸಿ ಎಂದು ಸಭೆ ಬಳಿಕ ಪ್ರಧಾನಿ ಸಲಹೆ ನೀಡಿದ್ದಾರೆ. ಕೋವಿಡ್‌ ಪರೀಕ್ಷೆ ಹೆಚ್ಚಳ ಮತ್ತು ಬಲವರ್ಧಿತ ಕಣ್ಗಾವಲು ಅಗತ್ಯವನ್ನು ಸಭೆಯಲ್ಲಿ ಮೋದಿ ಒತ್ತಿ ಹೇಳಿದರು.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ಗೃಹ ಸಚಿವ ಅಮಿತ್‌ ಶಾ, ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯ ಮತ್ತು ಇತರ ಹಿರಿಯ ಅಧಿಕಾರಿಗಳು ವರ್ಚ್ಯುವಲ್‌ ಸಭೆಯಲ್ಲಿ ಭಾಗಿಯಾದರು. ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳು ಸಭೆಯಲ್ಲಿ ಕೋವಿಡ್‌ ಸ್ಥಿತಿಗತಿ ಮತ್ತು ಸಿದ್ಧತೆ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.//////