Belagavi News In Kannada | News Belgaum

ಬೆಳಗಾವಿಯಲ್ಲಿ ಮುಖಾಮುಖಿ ಭೇಟಿಯಾದ ಸಿದ್ದು- ಈಶ್ವರಪ್ಪ

ಬೆಳಗಾವಿ: ಇಲ್ಲಿನ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಭೋಜನ ವಿರಾಮಕ್ಕಾಗಿ ಕಲಾಪ ಮುಂದೂಡಿದಾಗ ರಾಜಕೀಯದಲ್ಲಿ ಬದ್ದ ವೈರಿಗಳಾದ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಲಿಫ್ಟ್‌ನಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿ ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂಬುದನ್ನು ಸಾಬೀತು ಪಡಿಸಿದರು.

ಲಿಫ್ಟ್‌ನಲ್ಲಿ ಉಭಯ ನಾಯಕರು ಒಟ್ಟಾಗಿ ಸಾಗಿದರು. ಪರಿಷತ್ ಸದಸ್ಯರು ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು. ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವಾಗ ಉಭಯ ನಾಯಕರ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ. ಕಲಾಪಕ್ಕೆ ಗೈರಾಗಿದ್ದ ಈಶ್ವರಪ್ಪ ಮೂರು ದಿನಗಳ ನಂತರ ಕಲಾಪಕ್ಕೆ ಹಾಜರಾದರು./////