Belagavi News In Kannada | News Belgaum

ರೈತ ಉತ್ಪಾದಕ ಕಂಪನಿಯ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಸಮಗ್ರ ಕೃಷಿ ಕಾರ್ಯಾಗಾರ

ಬೈಲಹೊಂಗಲ:ರೈತರಿಗೆ ಕಾಲಕಾಲಕ್ಕೆ ತಕ್ಕ ಮಳೆ, ಸರಿಯಾದ ಬೆಳೆಗೆ ಬೆಲೆ ಬಂದರೆ ಪ್ರಪಂಚದಲ್ಲಿ ರೈತರೆ ಎಲ್ಲರಕ್ಕಿಂತ ಹೆಚ್ಚು ಶ್ರೀಮಂತರಾಗುವರು ಎಂದು ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ಈಕೊ ಸಂಸ್ಥೆ ಹಾಗೂ ಜಗಜ್ಜನನಿ ರೈತ ಉತ್ಪಾದಕ ಕಂಪನಿಯ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಸಮಗ್ರ ಕೃಷಿ ಕಾರ್ಯಾಗಾರದ ಸಾನಿಧ್ಯವಹಿಸಿ ಮಾತನಾಡಿ, ಎಲ್ಲ ಜೀವಿಗಳಿಗೆ ದುಡಿದು ಅನ್ನ ಹಾಕುವ ರೈತ ಇಂದು ಬಡವನಾಗಿದ್ದಾನೆ ಅತನ ಪರಿಶ್ರಮದಿಂದ ಬಂದ ಉತ್ಪನ್ನಗಳನ್ನು ಬಳಸಿಕೊಂಡವರೆಲ್ಲ ಕೋಟ್ಯಾಧೀಶರಾಗಿದ್ದಾರೆ. ರೈತ ಬಿಸಿಲು ಮಳೆ ಚಳಿಯನ್ನದೆ ದಿನದ 24 ಘಂಟೆಗಳ ಕಾಲದಲ್ಲಿ ಹೆಚ್ಚಿನ ಸಮಯ ತನ್ನ ಕೃಷಿ ಕಾಯಕದಲ್ಲಿ ನಿರತನಾಗುತ್ತಾನೆ. ಆದರು ಆತನ ಬೆವರಿಗೆ ತಕ್ಕ ಬೆಲೆ ಇಲ್ಲದೆ ಕಂಗಾಲಗುತ್ತಿರುವದು ನ್ಯಾಯಸಮ್ಮತವಲ್ಲ. ರೈತರು ಸಹಿತ ಹೆಚ್ಚಿನ ಖರ್ಚುಗಳನ್ನು ಮಾಡದೆ ಕೃಷಿಯಲ್ಲಿ ನೂರಿತ ತಜ್ಞರಿಂದ ಅನುಭವ ಪಡೆದುಕೊಂಡು ಕಡಿಮೆ ವೆಚ್ಚದಲ್ಲಿ ಕೃಷಿಯನ್ನು ನಡೆಸುವ ಗುಣವನ್ನು ಕರಗತ ಮಾಡಿಕೊಳ್ಳಬೇಕೆಂದರು.
ಸವದತ್ತಿ ಎಪಿಎಂಸಿ ಮಾಜಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕೃಷಿ ಕುಟುಂಬದಲ್ಲಿ ಜನಿಸಿ 5ನೇ ಪ್ರಧಾನಿಯಾಗಿದ್ದ ಚೌಧರಿ ಚರಣಸಿಂಗ್ ಅವರ ಜನ್ಮದಿನವನ್ನ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸುವ ಮೂಲಕ ಕೃಷಿಯನ್ನೆ ನಂಬಿ ಎಲ್ಲರಿಗೂ ಅನ್ನ ನೀಡುವಲ್ಲಿ ಪ್ರಮುಖ ಪಾತ್ರವಹಿಸುವ
ರೈತರಿಗಾಗಿ ಸಂದ ಗೌರವವಾಗಿದೆ. ಚೌದರಿ ಚರಣ್ ಸಿಂಗ್‍ ಅವರು ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ
ಮತ್ತು ಕೂಲಿ ಕಾರ್ಮಿಕರ ಮೇಲೆ ಕಳಕಳಿಯನ್ನು ಹೊಂದಿದರ ಫಲವಾಗಿ ದೇಶದ ಪ್ರಧಾನಿಯಾಗಿ ಕೃಷಿಕರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ
ಯಶಸ್ವಿಯಾಗಿದ್ದರು. ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿದ್ದರು
ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ
ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರಿಂದ ಉಳಿಸಿ ರೈತರನ್ನು ಬದುಕಿಸಿದ ಮಹಾನ್ ಚೇತನವಾಗಿದ್ದ ಇವರು ದೇಶದ ರೈತರ ಬಗ್ಗೆ ದುರದೃಷ್ಟಿ ಹೊಂದಿದ್ದರಿಂದ ಬ್ರಿಟಿಷ್ ರಿಂದ ರಚಿಸಿದ ರೈತರ ಬೆಳೆ ಮಾರಾಟದ ಕಾನೂನು ಬದಲಾಗಬೇಕು ಕಂಪನಿಗಳು ತಯಾರಿಸುವ ವಸ್ತುಗಳ ಬೆಲೆಯನ್ನು ಅವರೆ ನಿರ್ಧರಿಸುವಂತೆ ರೈತರ ಬೆಳೆಗಳ ಬೆಲೆ ರೈತರೆ ನಿರ್ಧರಿಸಬೇಕು ಎಂಬ ಪರಿಕಲ್ಪನೆ ಕೊಟ್ಟಿದ್ದ ಇವರ ಮನದಾಳದ ಇಂಗಿತ ಇನ್ನುವರೆಗೂ ಈಡೆರದೆ ಇರುವದು ರೈತರಿಗೆ ಅಂಟಿದ ಶಾಪವಾಗಿದೆ. ರೈತರು ಶೂನ್ಯ ಕೃಷಿ ಕಾಯಕದಲ್ಲಿ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆಯಿಂದ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಂಡು ಹೊದಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯ ಎಂದರು.
ಕಂಪನಿಯ ಎಮ್ ಡಿ ಶಂಕರಗೌಡ ಪಾಟೀಲ, ಕೃಷಿ ವಿಜ್ಞಾನಿಗಳಾದ ಡಾ. ಆರ್.ಕೆ.ಪಾಟೀಲ, ಡಾ.ಎಸ್.ಡಿ.ಕೊಲೋಳಗಿ ಹಾಗೂ ಮಾರಾಟ ಮಹಾಮಂಡಳದ ಪ್ರಾಂತಿಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಮಲ್ಲಮ್ಮನ್ನವರ ಮಾತನಾಡಿ, ರೈತರು ಭೂಮಿಯ ಫಲವತ್ತೆಗೆ ಅನುಸರಿಸಬೇಕಾದ ಕ್ರಮಗಳು, ಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳದ ಹತೋಟಿ ಕ್ರಮ, ಜಾನುವಾರಗಳಿಗೆ ಮೇವಿನ ಸಮಗ್ರ ಕೃಷಿ, ರೈತರ ಉತ್ಪನ್ನಗಳ ಮೇಲೆ ಶೂನ್ಯ ಬಡ್ಡಿಯಲ್ಲಿ ಸಾಲ ಪಡೆದುಕೊಳ್ಳುವ ಕ್ರಮ ಮತ್ತು ಜಗಜ್ಜನನಿ ರೈತ ಉತ್ಪಾದಕಾ ಸಂಸ್ಥೆಯಿಂದ ರೈತರಿಗಾಗುವ ಅನಕೂಲತೆ ಬಗ್ಗೆ ತಿಳಿಸಿದರು. ಈಕೊ ಸಂಸ್ಥೆಯ ಸಂಯೋಜಕ ಈರಣಗೌಡ ದೊಡ್ಡಗೌಡರ ಹಾಗೂ ವೀರಪ್ಪ ಹುಂಬಿ ವೇದಿಕೆ ಮೆಲಿದ್ದರು.
ಈಕೊ ಸಂಸ್ಥೆ ಸಂಚಾಲಕ
ಸಿ.ಆಯ್.ಚಿನ್ನನ್ನವರ, ಎಫ್ ಪಿ ಓ ಸಂಸ್ಥೆಯ ಸಿಈಓ ಬಸವರಾಜ ವಾರದ, ನಿರ್ದೇಶಕರಾದ ಶ್ರೀಶೈಲ ಬಾಳೆಕುಂದರಗಿ, ಧರೆಪ್ಪ ಜೋತಗಣ್ಣವರ, ಮಡಿವಾಳಪ್ಪ ಬೋಳೆತ್ತಿನ, ಮಹಾಂತೇಶ ನೇಸರಗಿ ಮತ್ತು ರೈತರಾದ ಈರಣ್ಣ ಬೇಂಡಿಗೇರಿ, ಶಂಕರೆಪ್ಪ ಮತ್ತಿಕೊಪ್ಪ, ಮುದಕಪ್ಪ ಬೆಂಡಿಗೇರಿ, ಶ್ರೀಶೈಲ ಗಾಣಿಗೇರ, ರಮೇಶ ಆರೇರ, ರಮೇಶ ವಕ್ಕುಂದ, ಮಹಾಂತೇಶ ಅವರಾದಿ, ಸೋಮಪ್ಪ ಸಂಗೋಳ್ಳಿ, ನಿಂಗಪ್ಪ ಆರೇರ, ಸಂಜು ಚಿಕ್ಕೊಪ್ಪ, ಗೌಸ್ ಮುಲ್ಲಾ, ಶೇಖರ ಗೌರಿ, ಪುಂಡಲಿಕ ಇಂಗಳಗಿ, ರಮೇಶ ಕುಲಕರ್ಣಿ, ಈರಣ್ಣ ಆರೇರ, ಮಹಾಂತೇಶ ಗಾಣಿಗೇರ, ಶಂಕರೆಪ್ಪ ಬಾಳೆಕುಂದರಗಿ ನುರಾರು ರೈತರು ಇದ್ದರು.