Belagavi News In Kannada | News Belgaum

10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‍ ದೋಚಿದ ಖದೀಮರು

ಲಕ್ನೋ: 10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್‍ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಖದೀಮರು  4 ಅಡಿ ಅಗಲದ ಸುರಂಗವನ್ನು ಅಗೆದಿದ್ದಾರೆ. ಅದಾದ ಬಳಿಕ 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್‍ನ ವಾಲ್ಟ್‌ಗೆ ಪ್ರವೇಶಿಸಿದ್ದಾರೆ.

 

ಬ್ಯಾಂಕ್‍ನಲ್ಲಿದ್ದ 1.8 ಕೆಜಿಗಿಂತಲೂ ಹೆಚ್ಚು ತೂಕವಿದ್ದ 1 ಕೋಟಿ ಮೌಲ್ಯದ ಚಿನ್ನದ ಪೆಟ್ಟಿಗೆಯನ್ನು ದೋಚಿದ್ದಾರೆ. ಆದರೆ 32 ಲಕ್ಷ ರೂ. ನಗದು ಪೆಟ್ಟಿಗೆಯನ್ನು ತೆರೆಯಲು ಸಾಧ್ಯವಾಗದಿದ್ದರಿಂದ ಅದನ್ನು ಹಾಗೇ ಅಲ್ಲಿಟ್ಟು ಹೋಗಿದ್ದಾರೆ.

ಅಧಿಕಾರಿಗಳು ಬ್ಯಾಂಕ್‍ಗೆ ಬಂದಾಗ ಈ ಘಟನೆ ನಡೆದಿರುವುದನ್ನು ಗಮನಿಸಿದ್ದಾರೆ. ಜೊತೆಗೆ ಸುರಂಗ ತೋಡಿರುವುದರ ಬಗ್ಗೆಯೂ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಪೂರ್ಣ ನಕ್ಷೆಯ ಬಗ್ಗೆ ಚಿರಪರಿಚಿತರಿರುವರೇ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.