Belagavi News In Kannada | News Belgaum

ವಾಜಪೇಯಿಯವರ ರಾಜಕೀಯ ರಂಗದಲ್ಲಿ ಮೀನಗುವ ನಕ್ಷತ್ರವಾಗಿ ಸದಾ ಅವರ ಬೆಳಕು ಅಭಿವೃದ್ಧಿಪರ ಚಿಂತನೆ : ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ

ಬೆಳಗಾವಿ: ಅಜಾತ ಶತೃ ರಾಜಕೀಯ ಮುತ್ಸದ್ದಿ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ ಧಿಮಂತ ನಾಯಕ ವಾಜಪೇಯಿಯವರ ರಾಜಕೀಯ ರಂಗದಲ್ಲಿ ಮೀನಗುವ ನಕ್ಷತ್ರವಾಗಿ ಸದಾ ಅವರ ಬೆಳಕು ಅಭಿವೃದ್ಧಿಪರ ಚಿಂತನೆಗೆ ಅತ್ಯವಶ್ಯಕವಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದಿಂದ ರವಿವಾರ ನಗರದ ಆರ್ ಪಿಡಿ ವೃತ್ತದಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿಯವರ 98 ನೇಯ ಜನ್ಮದಿನಾಚರಣೆ, ಪ್ರಧಾನ ಮಂತ್ರಿ ಮೋದಿಜಿಯವರ ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದ ನೇರ ಪ್ರಸಾರ ವಿಕ್ಷಣೆಮಾಡಿದ ನಂತರ ಮಾತನಾಡಿ, ಅಟಲಬಿಹಾರಿ ವಾಜಪೇಯಿ ಸತ್ಯದ ದಾರಿಯಲ್ಲಿ, ತತ್ವ ಸಿದ್ದಾಂತದ ರಾಜಕೀಯ ದಾರಿಯಲ್ಲಿ ಸಾಗಿಬಂದ ರಾಜಕೀಯ ಸಂತ. ಅವರು ತಮ್ಮ ಜೀವನವನ್ನೆ ಭಾರತಾಂಭೆಯ ಸೇವೆಗೆ ಮುಡಿಪಾಗಿಟ್ಟಿದ್ದರು. ಬಾಂಗ್ಲಾ ಮೇಲೆ ದಾಳಿಮಾಡಿದ್ದ ಪಾಕಿಸ್ತಾನದ ನೀಚ ಬುದ್ದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಸೈನ್ಯಕಳಿಸಿ ವಿಜಯ ಸಾಧಿಸಿದ್ದನ್ನು ಸಂಸತ್ತಿನಲ್ಲಿ ವಿರೋಧ ಪಕ್ಷದಲ್ಲಿದ್ದರು ಅಟಲಜಿಯವರು ಮುಕ್ತ ಕಂಠದಿಂದ ಹೊಗಳಿದ್ದು ಅವರ ಪ್ರಮಾಣಿಕತೆಯ ಪ್ರತೀಕವಾಗಿದೆ.
ಹಳ್ಳಿಯಲ್ಲಿ ಜನಿಸಿ ಆರ್.ಎಸ್.ಎಸ್. ಕಾರ್ಯಕರ್ತರಾಗಿ ಜನಸಂಘದ ಶಿಸ್ತಿನ ಸಿಪಾಯಿಗಳಾಗಿ ಬಿಜೆಪಿಯ ಮೊದಲ‌ ರಾಷ್ಟ್ರೀಯ ಅಧ್ಯಕ್ಷರಾಗಿ ಕಾಂಗ್ರೆಸ್ ಹೊರತಾದ ಮೂರು ಬಾರಿ ಪ್ರಧಾನಿಗಳಾಗಿ 5 ವರ್ಷ ಪೂರ್ಣವಧಿ ಅಧಿಕಾರ ನಡೆಸಿದ ಧಿಮಂತ ನಾಯಕರಾಗಿದ್ದ ವಾಜಪೇಯಿಯವರ ಕಾಯಕಮಯ ಜೀವನ ಇಂದು ನಮಗೆ ಆದರ್ಶವಾಗಿದೆ. ಅಂತವರು ಸ್ಥಾಪಿಸಿದ ಬಿಜೆಪಿ ಪಾರ್ಟಿಯಲ್ಲಿರುವ ನಾವೆ ಧನ್ಯ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೊಣ . ಅಂದು ಸಂಸತ್ತಿನಲ್ಲಿ ಅಪಹಾಸ್ಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ವಾಜಪೇಯಿಜಿ ನಮ್ಮಬ್ಬಿರನ್ನ ನೋಡಿ ಅಪಹಾಸ್ಯ ಮಾಡೋ ಕಿಂಗ್ ನಾಯಕರೆ ಮುಂದೊಂದು ದಿನ ವಿರೋಧ ಪಕ್ಷದಲ್ಲಿಯೂ ಕುಳಿತುಕೊಳ್ಳವ ಯೋಗ್ಯತೆಯನ್ನು ಕಳೆದುಕೊಳ್ಳಲಿದ್ದಿರಿ ಎಂಬ ಮಾತು ಸತ್ಯವಾದ ನಂತರವೆ ತಮ್ಮ ದೇಹ ತ್ಯಾಗ ಮಾಡಿದ ಮಹಾನ ರಾಜಕೀಯ ನಾಯಕ ಅಟಲಜಿಯವರು ಎಂದರು. ವಿಭಾಗ ಸಹಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಎಮ್ ಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ವೀರಭದ್ರಯ್ಯ ಪೂಜಾರ, ಸಂತೋಷ ದೇಶನೂರ, ರಾಜೇಂದ್ರ ಧರಿಗೌಡರ, ಭೀಮಸ್ಸಿ ಮೇಳೆದವರ, ಉಮೇಶ ಪೂರಿ, ಕಾರ್ತಿಕ ಮಾದಮ್ಮನವರ ಹಾಗೂ ಪದಾಧಿಕಾರಿಗಳು ಇದ್ದರು.