Belagavi News In Kannada | News Belgaum

ಬೆಳಗಾವಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಒತ್ತಾಯಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ

ಬೆಳಗಾವಿ: ಬೆಳಗಾವಿಯಲ್ಲಿ ಪತ್ರಿಕಾ ಭವನ ನಿರ್ಮಾಣ ಮಾಡಲು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳಗಾವಿ ಜಿಲ್ಲಾ ಘಟಕದಿಂದಾ ಮನವಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು


ಈಗ ಮತ್ತೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ದಿನಾಂಕ 22-12-2022 ರಂದು ಕರ್ನಾಟಕ ಜರ್ನ ಲಿಸ್ಟ್ಸ್ ಯೂನಿಯನ್ ನಿನ ಜಿಲ್ಲಾ ಘಟಕ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿದ್ದಾರೆ
ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳಗಾವಿಯಲ್ಲಿ ಮನವಿ ನೀಡಿದರು ಯಾವುದೇ ಪ್ರಯೋಜನ ವಾಗುತ್ತಿಲ್ಲ ಎಂದು ಜಿಲ್ಲಾಧ್ಯಕ್ಷ ಸತೀಶ್‌ ಗುಡಗೇನಟ್ಟಿಯವರು ಕರ್ನಾಟಕದಲ್ಲಿ ಬೆಳಗಾವಿ ಅತಿದೊಡ್ಡ ಜಿಲ್ಲೆಯಾಗಿದ್ದು, ಆಗಾಗ ಜಿಲ್ಲೆಗೆ ಮಂತ್ರಿ ಮಹೋದಯರು, ಗಣ್ಯ ವ್ಯಕ್ತಿಗಳು ಭೇಟಿ ಕೊಡುತ್ತಾರೆ. ಅಲ್ಲದೆ ಆಗಾಗ ನಗರದಲ್ಲಿ ಪತ್ರಿಕಾಗೋಷ್ಠಿಗಳು ಜರುಗುತ್ತವೆ.

ಎರಡನೇ ರಾಜಧಾನಿಯಾದ ಬೆಳಗಾವಿ ನಗರದಲ್ಲಿ ಈ ವರೆಗೆ ಪತ್ರಿಕಾಭವನ ಇರದೇ ಇರುವುದು ಖೇದದ ಸಂಗತಿಯಾಗಿದೆ. ಬೆಳಗಾವಿ ಹೃದಯಭಾಗದಲ್ಲಿ ಪತ್ರಿಕಾಭವನ ನಿರ್ಮಾಣ ಮಾಡುವುದು ಅವಶ್ಯಕವಾಗಿದ್ದು, ಆದ ಕಾರಣ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ಸಾಕಷ್ಟು ಖುಲ್ಲಾ ಜಾಗವಿದ್ದು ಇಲ್ಲಿ ಪತ್ರಿಕಾಭವನ ಕಟ್ಟಡವನ್ನು ನಿರ್ಮಿಸಿದಲ್ಲಿ ಪತ್ರಿಕಾರಂಗಕ್ಕೆ ಸಹಕಾರಿಯಾಗಲಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಹಗೂ ವಾರ್ತಾ ಇಲಾಖೆಯ ಮಾಹಿತಿ ಪ್ರಕಾರ ಕನ್ನಡ ಸಾಹಿತ್ಯಭವನದ ಆವರಣದ ಖುಲ್ಲಾ ಜಾಗದಲ್ಲಿ ವಾರ್ತಾ ಇಲಾಖೆ ಹೆಸರಿನಲ್ಲಿ ಪತ್ರಿಕಾಭವನ ನಿರ್ಮಾಣಕ್ಕಾಗಿ ಜಾಗಮಂಜೂರು ಮಾಡಿರುವುದು ತಿಳಿದುಬಂದಿದ್ದು, ಈಗಾಗಲೇ ಪತ್ರಿಕಾಭನ ನಿರ್ಮಾಣಕ್ಕಾಗಿ 25 ಲಕ್ಷ ರೂಪಾಯಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕಾಯ್ದಿರಿಸಲಾಗಿದ್ದು, ಆರೇಳು ವರ್ಷ ಗತಿಸಿದೆ. ಆದ್ದರಿಂದ ಆದಷ್ಟು ಬೇಗನೆ ಪತ್ರಿಕಾ ಭವನ ನಿರ್ಮಾಣ ಅಡಿಗಲ್ಲು ಪೂಜೆ ಕಾರ್ಯವನ್ನು ನೇರವೇರಿಸಿ ಇನ್ನುಳಿದ ಭವನಕ್ಕೆ ತೊಲಗುವ ಹಣವನ್ನು ಬಿಡುಗಡೆಗೊಳಿಸಬೇಕಾಗಿ ಮನವಿ ಪತ್ರದಲ್ಲಿ ಕೋರಿದ್ದಾರೆ.