Belagavi News In Kannada | News Belgaum

ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಒಗ್ಗಟ್ಟು: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಬೆಳಗಾವಿ:  “ಗ್ರಾಮದಲ್ಲಿರುವ ಜನರ ಒಗ್ಗಟ್ಟು ಗಟ್ಟಿಕೊಳ್ಳಲಿಸಲು  ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಆದರಿಂದ,  ಗ್ರಾಮದ ಒಳತಿಗಾಗಿ ಇಂತಹ ಕಾರ್ಯಕ್ರಮಗಳು  ನಿರಂತರವಾಗಿ ನಡೆಯಲಿ” ಎಂದು   ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು   ಹೇಳಿದರು.

ಯಮಕನಮರಡಿ ಮತಕ್ಷೇತ್ರದ  ಮನ್ನಿಕೇರಿ ಗ್ರಾಮದ ಶ್ರೀ ಲಕ್ಷ್ಮೀದೇವಿ  ಮೂರ್ತಿ ಪ್ರತಿಷ್ಠಾಪನಾ ಹಾಗೂ ದೇವಸ್ಥಾನ ಕಳಸಾರೋಹಣ  ನೇರವೇರಿಸಿ ಅವರು ಮಾತನಾಡಿದರು,

ಸಹಭಾಗಿತ್ವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದ್ವಿಚಾರಗಳನ್ನು ಆಲಿಸುವದರಿಂದ ಸೇವಾ ಮನೋಭಾವದಿ ಭಾಗವಹಿಸುವಿಕೆಯಿಂದ ಮನಸ್ಸು ಹಗುರವಾಗಿ ನಾಲ್ಕು‌ ಮಂದಿ ಜೊತೆ ಬೆರೆಯುವ ಮೂಲಕ ಪರಸ್ಪರರ ಕಷ್ಟ ಸುಖಕ್ಕೆ ಹೆಗಲು ನೀಡುವ ಮೂಲಕ ಬದುಕಿನ ದಾರಿ ಕಂಡುಕೊಳ್ಳಬಹುದು ಎಂದರು.

“ಬದುಕಿನ ಪಯಣದಲ್ಲಿ ಶಾಂತಿ, ಸಂಯಮ, ನೆಮ್ಮದಿಗಾಗಿ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿದೆ. ಗ್ರಾಮಸ್ಥರು ಇತಂಹ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಿಳಿಸಿದ ಅವರು, ಗ್ರಾಮದ ಅಭಿವೃದ್ದಿಗಾಗಿ ಸಹಾಯ, ಸಹಕಾರ ನೀಡಲಾವುದು. ಗ್ರಾಮದ ಜನತೆಗೆ ಒಳಿತಾಗಲಿ” ಎಂದು ಶುಭ ಹಾರೈಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಅವರು ಮಾತನಾಡಿ, ಸುಮಂಗಲಿಯರ ಕುಂಭದೊಂದಿಗೆ  ಗ್ರಾಮದಲ್ಲಿ   ಶುಭ ಕಾರ್ಯ  ನೇರವೇರಿದೆ.  ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಆ, ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಹೇಳಿದರು.

ಧರ್ಮ ಕಾರ್ಯಗಳನ್ನು ಮಾಡುವುದರಿಂದ  ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ. ಸಮದ್ಧಿಯಿಂದ ಜನತೆ ನೆಮ್ಮದಿ ಜೀವನ ಸಾಗಿಸಬಹುದು. ಜನತೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ಸುಯಾಗಿ ನಡೆಯಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕಳಸಾರೋಹಣ ಸಂಭ್ರಮದಲ್ಲಿ ಗ್ರಾಮದ ಸುಮಂಗಲಿಯರು ಕುಂಭ ಕಳಸ, ಆರತಿ ಹೊತ್ತು  ದೇವಿ ದರ್ಶನ ಪಡೆದು ಪುನೀತರಾದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಕಿರಿಯರು‌ ಮತ್ತು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಹಿರಿಯರು ಹಾಗೂ ಇತರರು ಇದ್ದರು.//////