Belagavi News In Kannada | News Belgaum

ಧೋನಿ ಮಗಳಿಗೆ ಉಡುಗೊರೆ ನೀಡಿದ ಲೆಜೆಂಡರಿ ಫುಟ್ಬಾಲ್ ಮೆಸ್ಸಿ

ದೆಹಲಿ: ಲೆಜೆಂಡರಿ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ…ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಮಗಳಿಗೆ ಉಡುಗೊರೆ ನೀಡಿದ್ದಾರೆ. ಧೋನಿ ಪುತ್ರಿ ಝಿವಾ ಅವರು ಸ್ವತಃ ಮೆಸ್ಸಿ ಅವರ ಹಸ್ತಾಕ್ಷರವಿರುವ ಅರ್ಜೆಂಟೀನಾ ಜೆರ್ಸಿಯನ್ನು ಉಡುಗೊರೆಯಾಗಿ ಪಡೆದರು. ಝಿವಾ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಧೋನಿ ಇದನ್ನು ಬಹಿರಂಗಪಡಿಸಿದ್ದಾರೆ.

ಝಿವಾ ಜರ್ಸಿಯನ್ನು ಧರಿಸಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಮೆಸ್ಸಿ ಈ ಜೆರ್ಸಿಯ ಮೇಲೆ ‘ಪ್ಯಾರಾ ಝಿವಾ’ ಎಂದೂ ಬರೆದಿದ್ದಾರೆ. ಧೋನಿಗೂ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಧೋನಿ ಬಿಡುವಿನ ವೇಳೆಯಲ್ಲಿ ಫುಟ್ಬಾಲ್ ಆಡಲು ಇಷ್ಟಪಡುತ್ತಾರೆ.

ತನ್ನ ತಂದೆಯಿಂದ ಝಿವಾ ಕೂಡಾ ಫುಟ್‌ಬಾಲ್‌ ಬಗ್ಗೆ ಒಲವು ಬೆಳೆಸಿಕೊಂಡರು. ಇತ್ತೀಚಿಗೆ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದ ನಂತರ ಲಿಯೋನೆಲ್ ಮೆಸ್ಸಿ ಅವರ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಅರ್ಜೆಂಟೀನಾದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಮೆಸ್ಸಿ ಅಭಿಮಾನಿಗಳನ್ನು ಹೊಂದಿದ್ದಾರೆ./////