ಪರಿಷತ್ತಿನಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2022ಕ್ಕೆ ಅಂಗೀಕಾರ
ಚಳಿಗಾಲ ಅಧಿವೇಶನ-2022 ಸುವರ್ಣ ಸೌಧ, ಬೆಳಗಾವಿ

ಬೆಳಗಾವಿ ಸುವರ್ಣಸೌಧ ಡಿಸೆಂಬರ್ 28 : ಕರ್ನಾಟಕ ಭೂ ಕಂದಾಯ ಅಧಿನಿಯಮ (ಮೂರನೇ ತಿದ್ದುಪಡಿ) ವಿಧೇಯಕಕ್ಕೆ ಪರಿಷತ್ತಿನಲ್ಲಿ ಇಂದು ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕಾರವಾದ ಕರ್ನಾಟಕ ಭೂ ಕಂದಾಯ ಅಧಿನಿಯಮ (ಮೂರನೇ ತಿದ್ದುಪಡಿ) ವಿಧೇಯಕವನ್ನು ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಸದನದಲ್ಲಿ ಮಂಡಿಸಿದರು. ವಿಧೇಯಕದ ಪ್ರಸ್ತಾವವನ್ನು ಉಪ ಸಭಾಪತಿ ಪ್ರಾಣೇಶ ಎಂ.ಕೆ. ಅವರು ಸದನದ ಅಂಗೀಕಾರಕ್ಕಾಗಿ ಸದನದ ಮುಂದೆ ತಂದರು.
ಕಂದಾಯ ಸಚಿವರಾದ ಆರ್ ಅಶೋಕ ಅವರು ವಿಧೇಯಕದ ಪ್ರಸ್ತಾವನೆಯ ಬಗ್ಗೆ ವಿವರಿಸಿ, ಈ ಕಾಯಿದೆಯಿಂದಾಗಿ ಸರ್ಕಾರಕ್ಕೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ವ್ಯಾಪಾರೀಕರಣಕ್ಕೆ ಅವಕಾಶವಿರುವುದಿಲ್ಲ. ಸರ್ಕಾರಕ್ಕೆ ಆದಾಯ ತರುವ ರೀತಿಯಲ್ಲಿ ವಿಧೇಯಕವನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ವಿಧೇಯಕದ ಬಗ್ಗೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಸುಧೀರ್ಘ ಮಾತನಾಡಿದರು. ಬಳಿಕ ಪರಿಷತ್ತಿನ ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಯಿತು.