Belagavi News In Kannada | News Belgaum

ಪಂಚಮಸಾಲಿ ಸಮಾಜದ ಚಿತ್ತ ಇಂದಿನ ಸಚಿವ ಸಂಪುಟ ಸಭೆಯತ್ತ: ಬಸವ ಜಯಮೃತ್ಯುಂಜಯ ಶ್ರೀ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ ಇಂದು ಸಂಜೆ ೫ ಗಂಟೆಗೆ ಸಚಿವ ಸಂಪುಟ ಸಭೆ ಇದೆ ಎಂದು ಕೂಡಲ ಸಂಗಮ ಪಂಚಮಸಾಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ 2 ಎ‌ ಮೀಸಲಾತಿಗಾಗಿ ಕಳೆದ ಎರಡೂ‌ ವರ್ಷಗಳಿಂದ ನಿರಂತರವಾಗಿ ನಡೆದ ಹೋರಾಟ ಬೆಳಗಾವಿಯಲ್ಲಿ ಬಂದು ನಿಂತಿದೆ. ನಮ್ಮ ಸಮಾಜದ ಧ್ವನಿ ಸರಕಾರಕ್ಕೆ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಸರಕಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಚಿವ ಸಿ.ಸಿ.ಪಾಟೀಲ ಸೇರಿದಂತೆ ನಮ್ಮ ನಿಯೋಗಕ್ಕೆ ಯಾವುದೇ ಕಾರಣಕ್ಕೂ ಮುತ್ತಿಗೆ ಹಾಕದಂತೆ ಮನವಿ ಮಾಡಿಕೊಂಡು, ಡಿ.29ರಂದು ಮೀಸಲಾತಿ ಕೊಡುವುದಾಗಿ‌ ಭರವಸೆ ನೀಡಿದ್ದಾರೆ.
ಆದರೆ ಕೆಲ ಊಹಾಪೋಹಗಳ‌ ಸುದ್ದಿಗಳು ಹರಿದಾಡುತ್ತಿದ್ದು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಕ್ಕೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ವಿಷಯದ ಕುರಿತು ನಾವು ಅಧ್ಯಯನ ಮಾಡಿದ್ದೇವೆ. ಅದಕ್ಕೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಕಾನೂನು ಹೋರಾಟ ಮಾಡುವವರು ಮಾಡಲು ಇಂದು ನಡೆಯುವ ಸಚಿವ ಸಂಪುಟದ ಸಭೆ ಮಹತ್ವದ್ದಾಗಿದೆ. ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು‌ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ‌ ಬಸವಣ್ಣನವರು ಆಗುತ್ತಾರೋ ಅಥವಾ ಕೆಂಗಣ್ಣಿಗೆ ಗುರಿಯಾಗುತ್ತಾರೋ ಎನ್ನುವುದನ್ನು ಕಾದು‌ ನೋಡುತ್ತೇವೆ ಎಂದರು.
ಪಂಚಮಸಾಲಿ ಸಮಾಜದ ಬಾಂಧವರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳು ಬಾರದು. ಸಂಜೆ ಐದು ಗಂಟೆಯವರೆಗೆ ಕಾಯೋಣ. ಅಲ್ಲಿಯವರಗೂ ಎಲ್ಲ ಸಮಾಜದವರು ಶಾಂತರಾಗಿರಬೇಕು ಎಂದು ಮನವಿ‌ ಮಾಡಿಕೊಂಡರು.
ಈ ವೇಳೆ ಮಾಜಿ ಶಾಸಕ ಎಚ್.ಎ. ಶಿವಶಂಕರ, ಆರ್.ಕೆ. ಪಾಟೀಲ, ನಿಂಗಪ್ಪ ಪಿರೋಜಿ ಸೇರಿದಂತೆ ಇನ್ನಿತರರು ಇದ್ದರು.///////