Belagavi News In Kannada | News Belgaum

ಭಗವಾನ ಮಹಾವೀರರ ಸಂದೇಶ ಮಾನವ ಕುಲಕ್ಕೆ ಸ್ಪೂರ್ತಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿಯಲ್ಲಿಂದು ಲಕ್ಷ್ಮೀಸೇನ ಭಟ್ಟಾರಕ ಶ್ರೀಗಳ ಬೆಳಗಾವಿ ಪುರಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಸಚಿವ ಅಶ್ವತ್ಥನರಾಯಣ , ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 

: ಬೆಳಗಾವಿಯಲ್ಲಿಂದು ಲಕ್ಷ್ಮೀಸೇನ ಭಟ್ಟಾರಕ ಶ್ರೀಗಳ ಬೆಳಗಾವಿ ಪುರಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜೈನ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.)
ಬೆಳಗಾವಿ.ಡಿ.29: ಇಡಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡಿದ ಭಗವಾನ ಮಹಾವೀರರ ಜೀವನ ಚರಿತ್ರೆಯು ಇಡಿ ಮಾನವ ಕುಲಕ್ಕೆ ಸ್ಪೂರ್ತಿ ನೀಡುವ ಸಂದೇಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು .
ಬೆಳಗಾವಿಯಲ್ಲಿಂದು ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳ ಬೆಳಗಾವಿ ಪುರ ಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಭಗವಾನ ಮಹಾವೀರರು ಅಹಿಂಸೆಯ ಸಂದೇಶ ನೀಡಿರುವುದು ಮಾನವ ಕುಲಕ್ಕೆ . ಒಂದು ಸಣ್ಣ ಜೀವಿಯನ್ನು ಸಹ ಹತ್ಯೆ ಮಾಡಬೇಡ . ಬದುಕು ಮತ್ತು ಬದಕಲು ಬಿಡು ಎಂಬ ಸಂದೇಶ ಇಂದಿಗೂ ಪ್ರಸ್ತೂತವಾಗಿದೆ. ಹಾಗಾಗಿ ಇಂದಿಗೂ ಸಹ ಭಾರತ ದೇಶದಲ್ಲಿ ಅಹಿಂಸೆಯ ತತ್ವಗಳನ್ನು ಪಾಲಿಸಲಾಗುತ್ತದೆ.
ಭಾರತ ದೇಶ ಒಂದು ಆಧ್ಯಾತ್ಮಿಕವಾದ ದೇಶವಾಗಿದೆ. ಇಲ್ಲಿ ಜೈನ , ಬೌದ್ದ ಶೀಖ ಸಂಪ್ರದಾಯಗಳು ಬೆಳೆದು ಬಂದಿದೆ.ಇಂತಹ ಆಧ್ಯಾತ್ಮಿಕ ದೇಶದಲ್ಲಿ ಜೈನ ಧರ್ಮ ತನ್ನದೇ ಆದ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿದೆ. ಜೈನ ಮುನಿಗಳು ದಿಗಂಬರರಾಗಿ ಕಾಲ್ನಡಿಗೆಯಲ್ಲಿಯೇ ದೇಶ ಸುತ್ತುತ್ತಾರೆ. ಅವರತಂಹ ತ್ಯಾಗಿಗಳು ನೋಡುವುದು ಮತ್ತು ಅವರ ಆರ್ಶಿವಾದ ಪಡೆಯುವುದು ನಮ್ಮ ಪುರ್ವಜನ್ಮದ ಪುಣ್ಯ ಎಂದು ಹೇಳಬಹುದು ಎಂದರು.
ಇದೀಗ ಬೆಳಗಾವಿಗೆ ಕೊಲ್ಲಾಪೂರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು ಮತ್ತು ನಾಂದಣಿ ಮಠದ ಜನಸೇನ ಭಟ್ಟಾರಕ ಸ್ವಾಮೀಜಿಗಳು ಆಗಮಿಸಿರುವುದು ಈ ಭಾಗದ ಪುಣ್ಯ. ಇಂತಹ ತಪಸ್ವಿಗಳು ಮೇಲಿಂದ ಮೇಲೆ ಈ ನೆಲದಲ್ಲಿ ಸಂಚರಿಸುತ್ತ ಇದ್ದರೆ ನಮ್ಮ ಭೂಮಿ ಪಾವನವಾಗಲಿದೆ ಎಂದರು .
ಈ ಸಮಾರಂಭವನ್ನು ಆಯೋಜಿಸಿರುವ ಶಾಸಕ ಅಭಯ ಪಾಟೀಲ ಅವರು ಯಾವಾಗಲು ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತ್ತ ಬಂದಿದ್ದಾರೆ. ಅವರ ಕಾರ್ಯವೈಖರಿ ಮತ್ತು ಅವರು ದೂರದೃಷ್ಟೀಯಿಂದ ಇಂದು ಬೆಳಗಾವಿ ಸಾಕಷ್ಟು ಅಭಿವೃದ್ದಿ ಕಂಡಿದೆ. ಮಾಜಿ ಶಾಸಕ ಸಂಜಯ ಪಾಟೀಲ ಅವರು ಸಹ ತಮ್ಮ ಆಡಳಿತವಾಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ಅಭಿವೃದ್ದಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಸಲ ಅವರು ಮುಖ್ಯಮಂತ್ರಿಯಾಗಿ ಬೆಳಗಾವಿ ಜಿಲ್ಲೆಗೆÀ ಅದರಲ್ಲೂ ವಿಶೇಷವಾಗಿ ಬೆಳಗಾವಿ ನಗರಕ್ಕೆ ಅನೇಕ ಹೊಸ ಯೋಜನೆಗಳನ್ನು ತರಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಬೆಳಗಾವಿ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು ಹಾಗೂ ಜಿನಸೇನ ಭಟ್ಟಾರಕ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ತದನಂತರ ಬೆಳಗಾವಿ ಜೈನ ಸಮಾಜದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಪಾದಪೂಜೆ ಮಾಡಿ ಅವರನ್ನು ಬೆಳಗಾವಿಗೆ ಬರ ಮಾಡಿಕೊಳ್ಳಲಾಯಿತು. ಮಾಜಿ ಶಾಸಕ ಸಂಜಯ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿನೋದ ದೊಡ್ಡಣ್ಣವರ, ಪುಷ್ಪಕ ಹನಮಣ್ಣವರ, ರಾಜೇಂದ್ರ ಜಕ್ಕನ್ನವರ, ನ್ಯಾಯವಾದಿ ರವಿರಾಜ ಪಾಟೀಲ, ಪ್ರಮೋದ ಪಾಟೀಲ, ಸಚಿನ ಪಾಟೀಲ, ಅಭಯ ಅವಲಕ್ಕಿ, ವಿನಯ ಬಾಳಿಕಾಯಿ , ಸಂಜಯ ರೋಟೆ, ಬಾಬಾಜಿ ಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕುಮುದಾ ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಲಕ್ಷ್ಮೀಸೇನ ಭಟ್ಠಾರಕ ಶ್ರೀಗಳನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಗೋಮಟೇಶ ವಿದ್ಯಾಪೀಠದಿಂದ ಪ್ರಾರಂಭಗೊಂಡ ಮೆರವಣಿಗೆ ಹಿಂದವಾಡಿ, ಮಹಾವೀರ, ಗೋವಾವೇಸ ಸರ್ಕಲ, ಎಸ್.ಪಿ.ಎಂ. ರಸ್ತೆಯ ಮೂಲಕ ಮಹಾತ್ಮಾ ಫೂಲೆ ರಸ್ತೆಯ ಮೇಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮುಕ್ತಾಯಗೊಂಡಿತು.