Belagavi News In Kannada | News Belgaum

ಮಹದಾಯಿ ಆದೇಶ,  ಪಂಚಮಸಾಲಿ ಮೀಸಲಾತಿಯಲ್ಲಿ  ಯಾವುದೇ ಸ್ಪಷ್ಟತೇ ಇಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ” ಮಹದಾಯಿ ಆದೇಶ,  ಪಂಚಮಸಾಲಿ ಮೀಸಲಾತಿಯಲ್ಲಿ ಗೊಂದಲಗಳಿವೆ. ಯಾವುದೇ ಸ್ಪಷ್ಟತೇ ಇಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಆಗಮಿಸುತ್ತಿದಂತೆ ಬಿಜೆಪಿಯವರು  ಮಹದಾಯಿ ಆದೇಶ,  ಪಂಚಮಸಾಲಿ ಮೀಸಲಾತಿ ಘೋಷಣೆ ಮಾಡಿದೆ.  ಇದರಿಂದ  ಗೊಂದಲಗಳೆ ಸೃಷ್ಟಿಯಾಗಿವೆ  ಎಂದು ಕಿಡಿಕಾರಿದರು.

ಕಾಂಗ್ರೆಸ್‌ ನಿಂದ   ಹುಬ್ಬಳ್ಳಿಯಲ್ಲಿ  ಮಹದಾಯಿ ಯೋಜನೆ ಜಾರಿಯಾಗಿಬೇಕೆಂದು ಒತ್ತಾಯಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಆದೇಶ ಬಂದರು ಕೂಡ ಸರ್ಕಾರ ಕಾರ್ಯರೂಪಕ್ಕೆ ತರುವುದೇ ಇರುವುದು ಹಾಗೂ ಗೆಜೆಟ್ ಮಾಡದೇ ಇರುವುದು ರಾಜ್ಯದ ಹಿತಾಶಕ್ತಿಯೇ ಕಾಯುವುದಕ್ಕೆ ಸರ್ಕಾರ ಸಂಪೂರ್ಣ ವಿಫಲ ಹೊಂದಿದೆ. ಸರ್ಕಾರದ ವಿಫಲತೆಯನ್ನು ಜನರ ಮುಂದೆ ಇಡುತ್ತೇವೆ ಎಂದು ಹೇಳಿದರು.

ಜ. 11 ರಿಂದ ಬೆಳಗಾವಿಯಿಂದ ಕಾಂಗ್ರೆಸ್  ಬಸ್ ಯಾತ್ರೆಗೆ   ಚಾಲನೆ ದೊರೆಯಲಿದೆ.
ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಒಂದೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರು ಬಸ್ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ರಮ ಬೆಳಗಾವಿಂದ ಹಮ್ಮಿಕೊಳ್ಳಲಿದ್ದಾರೆ. ಅದರ ಸಕಲ ಸಿದ್ಧತೆಯನ್ನು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದರು.

ಚುನಾವಣೆಯ ಸನ್ನಿಹದಲ್ಲಿ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡಿಗೆ ರವಾನಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವಿನ್ನು ಅದರ ಬಗ್ಗೆ ಸರಿಯಾದ ಮಾಹಿತಿ ಹಾಗೂ ಸಭೆ ತೆಗೆದುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.//////