Belagavi News In Kannada | News Belgaum

ಜ. 11 ರಿಂದ ಬೆಳಗಾವಿಯಿಂದ ಕಾಂಗ್ರೆಸ್  ಬಸ್ ಯಾತ್ರೆಗೆ   ಚಾಲನೆ

ಬೆಳಗಾವಿ:  ಜ. 11 ರಿಂದ ಬೆಳಗಾವಿಯಿಂದ ಕಾಂಗ್ರೆಸ್  ಬಸ್ ಯಾತ್ರೆಗೆ   ಚಾಲನೆ ದೊರೆಯಲಿದೆ. ಸ್ವಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಯಾತ್ರೆಗೆ ಬಲ ತುಂಬಿ ಯಶಸ್ಸಿಗೊಳ್ಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ   ಅವರು ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಜಿಲ್ಲಾಕಾಂಗ್ರೆಸ್‌ ವತಿಯಿಂದ ಆಯೋಜಿಸಲಾದ ಕಾಂಗ್ರೆಸ್‌ ಬಸ್‌ ಯಾತ್ರಾ ಪೂರ್ವಸಭೆಯಲ್ಲಿ  ಕಾಂಗ್ರೆಸ್‌ ಕಾರ್ಯಕರ್ತರನ್ನು  ಉದ್ದೇಶಿಸಿ ಮಾತನಾಡಿದ ಅವರು.

ಕಾಂಗ್ರೆಸ್ ಬಸ್ ಯಾತ್ರೆಗೆ  ಮುಹೂರ್ತ ಫಿಕ್ಸ್ ಆಗಿದೆ.  ಜನವರಿ 11ರಿಂದ ಬೆಳಗಾವಿಯಿಂದ ಶುರುವಾಗಲಿದೆ.  ಜಂಟಿ ಬಸ್ ಯಾತ್ರೆಯಲ್ಲಿ ಕಾಂಗ್ರೆಸ್ ನ ಹಲವು ನಾಯಕರು ಭಾಗಿಯಾಗಲಿದ್ದಾರೆ.  ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ ಎಂದರು.  ಬೆಳಗಾವಿ ಜಿಲ್ಲೆ ದೊಡ್ಡದಿರುವುದರಿಂದ 2 ವಿಭಾಗ ಮಾಡಿಕೊಂಡಿದ್ದು, ಚಿಕ್ಕೋಡಿ, ಬೆಳಗಾವಿಯಲ್ಲಿ ತಲಾ ಒಂದು ಸಭೆ ನಡೆಸಲಿದ್ದಾರೆ. ಬೆಳಗಾವಿಯಲ್ಲೇ ಕಾಂಗ್ರೆಸ್ನ ಪ್ರಥಮ ಅಧಿವೇಶನ ನಡೆದಿತ್ತು. ಹಾಗಾಗಿ ಬೆಳಗಾವಿಯಿಂದ ಬಸ್ ಯಾತ್ರೆ ಆರಂಭ ಮಾಡಲಾಗುತ್ತಿದೆ ಎಂದರು.

ಜ. 11ನೇ ತಾರೀಖಿನಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರು ಬಸ್ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ರಮ ಬೆಳಗಾವಿಂದ ಹಮ್ಮಿಕೊಳ್ಳಲಿದ್ದಾರೆ. ಅದರ ಸಕಲ ಸಿದ್ಧತೆಯನ್ನು ಈಗಾಗಲೇ ಪ್ರಾರಂಭಿಸಿದ್ದೇವೆ ಎಂದರು.

ಭಾರತ ಜೋಡೊ, ಕಲಬುರಗಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ  ಬೃಹತ್‌ ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್‌ ಕಾರ್ಯಕ್ರಮಗಳಿಗೆ ರಾಜ್ಯಾದ್ಯಂತ ಉತ್ತಮ ಸ್ಪಂಧನೆ ದೊರತ್ತಿದೆ. ಹೀಗಾಗಿ ಚಿತ್ರದುರ್ಗದಲ್ಲಿ ಎಸ್‌ ಸಿ/ ಎಸ್‌ ಟಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಜತೆ..ಜತೆಗೆ ಕಾಂಗ್ರೆಸ್‌ ಬಸ್‌ ಯಾತ್ರೆ ಆರಂಭಗೊಳಲಿದೆ. ಜಿಲ್ಲಾ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ಏಳಿಗಾಗಿ ಶ್ರಮಿಸೋಣ. ಕಾಂಗ್ರೆಸ್‌ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ತಮ್ಮ ಮೇಲಿದೆ. ಆದರಿಂದ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ನಾಯಕರು ಕಾರ್ತಕರ್ತರ ಜತೆಗೊಂಡಿಕೊಂಡು,  ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ  ಮಾಡಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯ ಆಗಮಿಸಿ  ಬಸ್ ಯಾತ್ರೆ ಯನ್ನು ಯಶಸ್ವಿಗೊಳ್ಳಿಸಬೇಕೆಂದು ಕರೆ ನೀಡಿದರು.

ಯಾತ್ರೆ ವೇಳಾಪಟ್ಟಿ ಇಲ್ಲಿದೆ:
ಜನವರಿ 11ರಂದು ಬೆಳಗಾವಿ ಜಿಲ್ಲೆ * ಜನವರಿ 16ರಂದು ಹೊಸಪೇಟೆ * ಜನವರಿ 17ರಂದು ಕೊಪ್ಪಳದಲ್ಲಿ ಯಾತ್ರೆ * ಜನವರಿ 18ರಂದು ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ * ಜನವರಿ 19ರಂದು ಹಾವೇರಿ, ದಾವಣಗೆರೆ ಜಿಲ್ಲೆ * ಜನವರಿ 21 ಹಾಸನ, ಚಿಕ್ಕಮಗಳೂರು * ಜನವರಿ 22 ಉಡುಪಿ, ದಕ್ಷಿಣ ಕನ್ನಡ. * ಜನವರಿ 23 ಕೋಲಾರ, ಚಿಕ್ಕಬಳ್ಳಾಪುರ * ಜನವರಿ 24 ತುಮಕೂರು, ಬೆಂಗಳೂರು ಗ್ರಾಮಾಂತರ * ಜನವರಿ 25 ಚಾಮರಾಜನಗರ, ಮೈಸೂರು * ಜನವರಿ 26 ಮಂಡ್ಯ ಮತ್ತು ರಾಮನಗರ *ಜನವರಿ 27 ಯಾದಗಿರಿ-ಕಲಬುರಗಿ  ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳಕರ್, ಮಾಜಿ ಶಾಸಕ ಅಶೋಕ ಪಟ್ಟಣ ,  ವೀರಕುಮಾರ ಪಾಟೀಲ, ಕಾಕಾಸಾಹೇಜ ಪಾಟೀಲ,  ರಾಜು ಸೇಠ, ರಮೇಶ ಕುಡಚಿ, ಸುನಿಲ್ ಹನ್ನಮನವರ, ಮಹಾವೀರ ಮೊಹಿತೆ,  ಎಸ್ ಬಿ ಘಾಟಗೆ, ಅಶೋಕ ಪೂಜಾರಿ, ಅರವಿಂದ ದಳವಾಯಿ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನವಲಗಟ್ಟಿ, ಚಿಕ್ಕೋಡಿ ಗ್ರಾಮೀಣ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ , ಸುನಿಲ್ ಸಂಕ, ಸಿದ್ದಕಿ ಅಂಕಲಗಿ, ಹಬ್ಬಿಬ ಶೀಲೆದಾರ.  ಕಾರ್ತಿಕ ಪಾಟೀಲ  ಹಾಗೂ ಇತರರು ಇದ್ದರು.//////