Belagavi News In Kannada | News Belgaum

ಬಿಜಿಎಸ್ ಗ್ಲೆನಿಗಲ್ಸ್ ಗ್ಲೊಬಲ್ ಆಸ್ಪತ್ರೆಯಲ್ಲಿ 60 ವರ್ಷದ ಕ್ಯಾನ್ಸರ್ ರೋಗಿಗೆ ಯಶಸ್ವಿ ಚಿಕಿತ್ಸೆ

ಬೆಳಗಾವಿ  : ಹೆಚ್ಚಿನ ಆಪಾಯದಲ್ಲಿದ್ದ ೬೦ ವರ್ಷದ ಮಹಿಳಾ ರಕ್ತ ಕ್ಯಾನ್ಸರ್ ರೋಗಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆಯಿಂದಾಗಿ ಬಿಜಿಎಸ್ ಗ್ಲೆನಿಗಲ್ಸ್ ಗ್ಲೊಬಲ್ ಆಸ್ಪತ್ರೆಯಲ್ಲಿ ಗುಣಮುಖರಾಗಿ ಹೊಸ ಜೀವನ ಆರಂಭಿಸಿದ್ದಾರೆ.
ಜ್ವರ, ಮೈ ಕೈ ನೋವು, ಆಲಸ್ಯ, ಕಾಮಾಲೆ, ಹಸಿವಾಗದಿರುವುದು, ಬಾಹ್ಯ ರಕ್ತಸ್ರಾವ, ಅಧಿಕ ರಕ್ತದೊತ್ತಡದಿಂದಾಗಿ ಹಿರಿಯ ಮಹಿಳೆ ತೇಜಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತಡಮಾಡದೇ ದೃಢವಾದ ಆರೈಕೆಯೊಂದಿಗೆ ಚಿಕಿತ್ಸೆ ಆರಂಭಿಸಲಾಯಿತು. ಬಳಿಕ ರೋಗಿಗೆ ರಕ್ತ ಕ್ಯಾನ್ಸರ್ [ಲಿಂಬೋಬ್ಲಾಸ್ಟಿಕ್ ಲ್ಯುಕೇಮಿಯಾ] ಇರುವುದು ಪತ್ತೆಯಾಯಿತು.
ಲಿಂಬೋಬ್ಲಾಸ್ಟಿಕ್ ಲ್ಯುಕೇಮಿಯಾ [ಎಎಲ್‌ಎಲ್] ರಕ್ತ ಮತ್ತು ಮೂಳೆ ಮಜ್ಜೆಯ ಕ್ಯಾನ್ಸರ್. ಮೂಳೆ ಮಜ್ಜೆಯ ಕೋಶ, ಮತ್ತದರ ಅನುವಂಶಿಕ ವಸ್ತು ಅಥವಾ ಡಿಎನ್‌ಎ ನಲ್ಲಿ ಬದಲಾವಣೆಯಾದಾಗ ಇಂತಹ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಈ ಆರೋಗ್ಯ ಸಮಸ್ಯೆ ಡಿಎನ್‌ಎ ಜೀವಕೋಶವನ್ನು ನಿರ್ದಿಷ್ಟ ದರದಲ್ಲಿ ಅಭಿವೃದ್ಧಿಪಡಿಸಲು ಮತ್ತು ನಿರ್ದಿಷ್ಟ ಸಮಯದಲ್ಲಿ ಮರಣಹೊಂದುವಂತೆ ಮಾಡುತ್ತದೆ.  ಅಸ್ಥಿಮಜ್ಜೆ ಕೋಶವನ್ನು ಸ್ವಯಂ ವಿಧಾನದಲ್ಲಿ ಪ್ರಸರಣ ಮತ್ತು ವಿಭಜಿಸಲು, ಪ್ರತಿರೋಧಕಗಳಿಗೆ ಇದು ನಿರೋಧಕವಾಗಿರುವಂತೆ ಮಾಡುತ್ತವೆ. ಆಧುನಿಕ ಚಿಕಿತ್ಸೆ ಮತ್ತು ಹೊಸ ಕಿಮೋಥೆರಪಿ, ಪ್ರಾಥಮಿಕ ಹಂತದ ಚಿಕಿತ್ಸೆ ನಂತರ ರೋಗಿಗಳು ಸಾಮಾನ್ಯ ಜೀವನ ನಡೆಸಲು ಸಾಧ್ಯವಿದೆ.
ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯಕೀಯ ಗ್ರಂಥಿಶಾಸ್ತ್ರ, ಮಕ್ಕಳ ಗ್ರಂಥಿಶಾಸ್ತ್ರ, ರಕ್ತದ ಗ್ರಂಥಿಶಾಸ್ತ್ರ ವಿಭಾಗದ ಡಾ. ರಾಜೀವ್  ವಿಜಯಕುಮಾರ್ ನೇತೃತ್ವದ ತಂಡ ಕ್ಲಿಷ್ಟಕರವಾದ ಚಿಕಿತ್ಸೆ ನೀಡುವಲ್ಲಿ ಸಫಲವಾಗಿದೆ. ಗ್ರಂಥಿ ಶಾಸ್ತ್ರ, ರಕ್ತ ಗ್ರಂಥಿ ಶಾಸ್ತ್ರ ಮತ್ತು ಬಿಎಂಟಿ ವೈದ್ಯಕೀಯ ವಿಭಾಗದ ಹಿರಿಯ ಸಮಾಲೋಚಕ ಡಾ. ಗೋವಿಂದ್ ಎರಿಟ್, ಗ್ರಂಥಿ ಶಾಸ್ತ್ರ ಮತ್ತು ಬಿಎಂಟಿ ವೈದ್ಯಕೀಯ ಹಾಗೂ ಮಕ್ಕಳ ರಕ್ತ ಗ್ರಂಥಿ ಶಾಸ್ತ್ರ ವಿಭಾಗದ ಸಮಾಲೋಚಕರಾದ ಡಾ. ಪ್ರೇರಣಾ ನೇಸರ್ಗಿ ತಂಡ ಮುತುವರ್ಜಿಯಿಂದ ಚಿಕಿತ್ಸೆ ನೀಡಿದೆ.
ಈ ವೈದ್ಯಕೀಯ ಯಶೋಗಾಥೆಯ ಕುರಿತು ಸಂತಸ ಹಂಚಿಕೊಂಡಿರುವ ತಜ್ಞ ವೈದ್ಯರು ೬೦ ವರ್ಷದ ಮಹಿಳೆಗೆ ಯಶಸ್ವಿ ಚಿಕಿತ್ಸೆ ನೀಡಿರುವುದು ಸಂತಸ ತಂದಿದೆ. ತೇಜಾ ಮತ್ತವರ ಕುಟುಂಬ ಸದಸ್ಯರು ತೋರಿದ ಧೈರ್ಯ ನಮ್ಮ ತಂಡ ಅಸಾಧ್ಯವಾದದ್ದನ್ನು ಸಾಧಿಸಲು ನೆರವಾಯಿತು ಎಂದರು. /////