Belagavi News In Kannada | News Belgaum

ಐಟಿಐ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ ಜ.6 ರಂದು

ಅರ್ಜಿ ಅಹ್ವಾನ

 

ಬೆಳಗಾವಿ, ಜ.06 (ಕರ್ನಾಟಕ ವಾರ್ತೆ): ಬೆಳಗಾವಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಉದ್ಯಮಬಾಗದಲ್ಲಿ ಜನವರಿ 6, 2023 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಹಾಗೂ ಅಪ್ರೆಂಟಿಸ್ ಶಿಪ್ ಮೇಳವನ್ನು ಆಯೋಜಿಸಲಾಗಿದೆ.
ಸದರಿ ಮೇಳದಲ್ಲಿ è TOYOTA Kirloskar, Bidadi, Bangalore and Fukoku India Pvt. Ltd., Machche, Belagavi ವರು ಭಾಗವಹಿಸುತ್ತಿದ್ದು, ಐ ಟಿ ಐ ಪಾಸಾದ ಎಲ್ಲ ವೃತ್ತಿಯ ಅಭ್ಯರ್ಥಿಗಳು ಅವಶ್ಯವಿರುವ (ಎಸ್.ಎಸ್.ಎಲ್.ಸಿ., ಐಟಿಐ ಅಂಕಪಟ್ಟಿ, ಆಧಾರ ಕಾರ್ಡ ಹಾಗೂ ಫೋಟೋ ಇತ್ಯಾದಿಗಳನ್ನು) ದಾಖಲಾತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಉದ್ಯಮಬಾಗ, ಬೆಳಗಾವಿ ಇಲ್ಲಿ ಹಾಜರಿರಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ 9902572875 (Placement Officer), 9448907736 (Taluka Apprenticeship Adviser), 8073241760 (ಎಖಿಔ) ರವರನ್ನು ಸಂಪರ್ಕಿಸಬಹದು ಎಂದು ಬೆಳಗಾವಿ ಪ್ರಾಚಾರ್ಯರಾದ ಆರ್. ಎಸ್. ಚಿಕ್ಕಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಬೆಳಗಾವಿ, ಜ.06  : 2022 ನೇ ವರ್ಷದಲ್ಲಿ ಸಾಲಿನಲ್ಲಿ ಪ್ರಥಮ ಮುದ್ರಾಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ ಜನವೆರಿ 31, 2023 ರ ಒಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪುಸ್ತಕದ ಒಂದು ಪ್ರತಿಯನ್ನು ಹಾಗೂ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಸಾರ್ವಜನಿಕ ಓದುಗರಿಗೆ ಒದಗಿಸಲು ಅನುಕೂಲವಾಗುವಂತೆ ಆಸಕ್ತಿಉಳ್ಳ ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ಪುಸ್ತಕವನ್ನು ಆಯ್ಕೆಗೆ ಸಲ್ಲಿಸುವಾಗ ತಮ್ಮ ಅನುಮತಿ ಪತ್ರದೊಂದಿಗೆ ಸದರಿ ಪುಸ್ತಕದ ಸಾಪ್ಟ್ ಕಾಫಿಯನ್ನು

ಸಿ.ಡಿ ರೂಪದಲ್ಲಿ (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಜನವರಿ 31, 2023 ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ ತದನಂತರ ಬಂದ ಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲಾ.

ನಿಗದಿತ ಅರ್ಜಿ ನಮೂನೆ ಹಾಗೂ ನಿಬಂಧನೆಗಳ ಮಾಹಿತಿಗಾಗಿ ಇಲಾಖೆ ಅಂತರ್ಜಾಲ www.dpl.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರ ಕಚೇರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ: ಅಂಬೇಡ್ಕರ್ ವೀಧಿ, ಬೆಂಗಳೂರು. ದೂರವಾಣಿ ಸಂಖ್ಯೆ: 080-22864990, 22867358 ಸಂಪರ್ಕಿಸಬಹದು ಎಂದು ಬೆಳಗಾವಿ ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ