Belagavi News In Kannada | News Belgaum

“ತಂಬಾಕು ದುಷ್ಪರಿಣಾಮದ ಕುರಿತು ತರಬೇತಿ ಕಾರ್ಯಾಗಾರ” : ಇನ್ನುಳಿದ ಸುದ್ದಿಗಳು ವೀಕ್ಷಿಸಿ

ಲೋಕಾಯುಕ್ತ ಅಧಿಕಾರಿ ಭೇಟಿ: ಸಾರ್ವಜನಿಕರಿಂದ ದೂರು, ಅಹವಾಲು ಸಲ್ಲಿಸಲು ಸೂಚನೆ

 

ಬೆಳಗಾವಿ, ಜ.05 : ಬೆಳಗಾವಿ ಲೋಕಾಯುಕ್ತ ಅಧಿಕಾರಿಯಾದ ಡಿಎಸ್‍ಪಿ ಜೆ ರಘು ಜನೆವರಿ 07, 2023 ರಂದು ಜಿಲ್ಲೆಯ ರಾಮದುರ್ಗ ತಾಲೂಕಿನ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರಕಾರಿ ಕೆಲಸ ನಿರ್ವಹಿಸಲು ಹಣ/ವಸ್ತು/ಲಂಚ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರು, ಅಹವಾಲಗಳನ್ನು 11 ಗಂಟೆಯಿಂದ 2 ಗಂಟೆಯವರಿಗೆ ಪ್ರವಾಸಿ ಮಂದಿರದಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ ಎಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ನಗರಾಭಿವೃದ್ಧಿ ಪ್ರಾಧಿಕಾರ: ಅರ್ಜಿ ಆಹ್ವಾನ

 

ಬೆಳಗಾವಿ, ಜ.05 : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿದ ವಿವಿಧ ಬಡಾವಣೆಗಳಲ್ಲಿ ಹಾಗೂ ಖಾಸಗಿ ವಿನ್ಯಾಸದಲ್ಲಿಯ ನಾಗರೀಕ ಸೌಲಭ್ಯ ನಿವೇಶನಗಳು ಹಂಚಿಕೆಗಾಗಿ ಲಭ್ಯವಿದ್ದರು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ನಾಗರೀಕ ಸೌಲಭ್ಯ ನಿವೇಶನಗಳನ್ನು ವಿವಿಧ ಉದ್ದೇಶಗಳಿಗೆ ಮೀಸಲಿಟ್ಟಿದ್ದು, ನೋಂದಣ ಗಾಗಿ ಅರ್ಜಿ ನಮೂನೆ 1-2 ಪ್ರಾಧಿಕಾರ ಕಚೇರಿಯಲ್ಲಿ ರೂ. 500/- ಶುಲ್ಕ ಪಾವತಿಸಿ, ಪಡೆಯಬಹುದು. ಅರ್ಜಿಯ ನಿಗಧಿತ ವಿವರಗಳನ್ನು ಭರ್ತಿ ಮಾಡಿ, ಜನೆವರಿ, 12, 2023 ರ ಸಂಜೆ 5.00 ಘಂಟೆಯೊಳಗಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಅಥವಾ ನೋಂದಣ ಅಂಚೆ ಮುಖಾಂತರ ಸಲ್ಲಿಸಬಹುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರೀತಮ್ ನಸಲಾಪುರೆ ಅವರು ತಿಳಿಸಿದ್ದಾರೆ////

 

RKVY ಯೋಜನೆಯಡಿ ಪಶುಭಾಗ್ಯ ಅರ್ಜಿ ಆಹ್ವಾನ

 

ಬೆಳಗಾವಿ, ಜ.05 : ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿ ವತಿಯಿಂದ 2022-23ನೇ ಸಾಲಿಗೆ ಖಏಗಿಙ ಯೋಜನೆಯಡಿಯಲ್ಲಿ ಪಶುಭಾಗ್ಯ ಆಧಾರಿತ ಕಾರ್ಯಕ್ರಮವಾದ “ಮುಖ್ಯ ಮಂತ್ರಿಗಳ ಅಮೃತ ಯೋಜನೆ” ಅನುಷ್ಠಾನ ಗೊಳಿಸಲು ಆದ್ಯತೆಯ ಮೇರೆಗೆ ಫಲಾನುಭವಿಗಳನ್ನಾಗಿ ಕೂಲಿ ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ 01 ಮಿಶ್ರ ತಳಿ ಹಾಲು ಕರೆಯುವ ಹಸು/01 ಸುದಾರಿತ ಎಮ್ಮೆ ವಿತರಿಸಲಾಗುವುದು. ಘಟಕದ ಮೊತ್ತ ರೂ. 62,000/- ಆಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.33.33% ಅಂದರೆ ರೂ. 20,665/- ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25% ಅಂದರೆ ರೂ. 15,500/- ಸಹಾಯಧನ ಒದಗಿಸಲಾಗುವುದು.
ಸಹಾಯಧನವನ್ನು ಹೊರತು ಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯುವುದು. ಸದರಿ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ.33.3), ಅಲ್ಪಸಂಖ್ಯಾತರಿಗೆ (ಶೇ.15), ವಿಶೇಷ ಚೇತನರಿಗೆ(ಶೇ.3)ರಷ್ಟು ಆಧ್ಯತೆ ನೀಡಲಾಗುವುದು.
ಅರ್ಹ ಫಲಾನುಭವಿಗಳು ಭರ್ತಿಮಾಡಿದ ಅರ್ಜಿಗಳನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ(ಆಡಳಿತ) ಸಲ್ಲಿಸಲು ಕೊನೆಯ ಜನವರಿ 20, 2023 ರೊಳಗಾಗಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥಣ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಂ.ಎಸ್.ಹುಂಡೇಕಾರ ಮೋ.ಸಂಖ್ಯೆ 9448305513 ಅಥವಾ ದೂರವಾಣ ಸಂಖ್ಯೆ 08289-251007, ಕಾಗವಾಡ, ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಂ.ಎಸ್.ಹುಂಡೇಕಾರ ಮೋ.ಸಂಖ್ಯೆ 9448305513 ಅಥವಾ ದೂರವಾಣ ಸಂಖ್ಯೆ 08289-251007, ಬೈಲಹೊಂಗಲ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಈರಣ್ಣಾ ಕೋಲಾರ ಮೋ.ಸಂಖ್ಯೆ 9448346935 ಅಥವಾ ದೂರವಾಣ 08288-295299, ಕಿತ್ತೂರ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಬಿ.ಪಿ.ಹಿರೇಮಠ ಮೋ.ಸಂಖ್ಯೆ 9972996209 ಅಥವಾ ದೂರವಾಣ 08288-286234, ಬೆಳಗಾವಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಆನಂದ ಪಾಟೀಲ ಮೋ.ಸಂಖ್ಯೆ 9448148822 ಅಥವಾ ದೂರವಾಣ 08288-286234, ಚಿಕ್ಕೋಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಸ್.ಎಂ.ಉಪ್ಪಾರ ಮೋ.ಸಂಖ್ಯೆ 9448859656 ಅಥವಾ ದೂರವಾಣ 08338-272203, ನಿಪ್ಪಾಣ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಜಯಕುಮಾರ ಕಂಕಣವಾಡಿ ಮೋ.ಸಂಖ್ಯೆ 9110418330 ಅಥವಾ ದೂರವಾಣ 08338-290556, ಗೋಕಾಕ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಮೋಹನ ಕಮತ ಮೋ. ಸಂಖ್ಯೆ 9986280456 ಅಥವಾ ದೂರವಾಣ 08332-226809, , ಮೂಡಲಗಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಮೋಹನ ಕಮತ ಮೋ. ಸಂಖ್ಯೆ 9986280456 ಅಥವಾ ದೂರವಾಣ 08332-226809, ಖಾನಾಪೂರ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎ.ಎಸ್.ಕೂಡಗಿ ಮೋ. ಸಂಖ್ಯೆ 8073028448 ಅಥವಾ ದೂರವಾಣ 08336-222488, ರಾಯಭಾಗ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ರಾಮು ರಾಠೋಡ ಮೋ. ಸಂಖ್ಯೆ 9449661871 ಅಥವಾ ದೂರವಾಣ 08331-225530, ರಾಮದುರ್ಗ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಗಿರೀಶ ಪಾಟೀಲ ಮೋ. ಸಂಖ್ಯೆ 9945854277 ಅಥವಾ ದೂರವಾಣ 08335-242117 ಹಾಗೂ ಸವದತ್ತಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಅನಿಲ ಮರಲಿಂಗಣ್ಣವರ ಮೋ. ಸಂಖ್ಯೆ 9449518864 ಅಥವಾ ದೂರವಾಣ 08337-254294 ಗೆ ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ: ರಾಜೀವ ಎನ್. ಕೂಲೇರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

“ತಂಬಾಕು ದುಷ್ಪರಿಣಾಮದ ಕುರಿತು ತರಬೇತಿ ಕಾರ್ಯಾಗಾರ”

 

ಬೆಳಗಾವಿ, ಜ.05 : ಪಶುಪಾಲನೆ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮದ ಕುರಿತು ತರಬೇತಿ ಕಾರ್ಯಾಗಾರ”ವನ್ನು ಹುಕ್ಕೆರಿ ತಾಲೂಕಿನಲ್ಲಿ ಬಸ್ತವಾಡ ಗ್ರಾಮದ ಶ್ರೀ 1008 ಪಾರ್ಶನಾಥ ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ (ಜ.5) ನಡೆಯಿತು.
ಕಾರ್ಯಕ್ರಮದ ಮೂದಲಿಗೆ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನಡೆಸಿದರು. ಎಸ್.ಜಿ. ಯಾದವ ಶ್ರೀ 1008 ಪಾಶ್ರ್ವನಾಥ ಸರಕಾರಿ ಪ್ರೌಢಶಾಲೆ ಬಸ್ತವಾಡ ಗ್ರಾಮದ ಮುಖ್ಯೋಪಾಧ್ಯಾಯರು ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮದ ಕುರಿತು ಶಾಲಾ ವಿಧ್ಯಾರ್ಥಿಗಳಿಗೆ ಜಾಗೃತಿ ಅತಿ ಅವಶ್ಯವಾಗಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಮಾತನಾಡಿದ ಬೆಳಗಾವಿ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ:ಬಿ.ಎನ್ ತುಕ್ಕಾರ ಅವರು ತಂಬಾಕು ಸೇವನೆಯಿಂದಾಗುವ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನುಷ್ಯನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಮತ್ತು ಸಿಗರೇಟ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯವು ಕೂಡಾ ಹಾಳಾಗುತ್ತದೆ ನಾವೆಲ್ಲರೊ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೆವೆಂದು ತಿಳಿಸಿದರು.
ಶಿಕ್ಷಣ ಸಂಸ್ಥಗಳ 100 ಗಜದ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟಮಾಡುತ್ತಿರುವ ಅಂಗಡಿ ಮಾಲಿಕರ ಮೇಲೆ ದಂಡ ವಿಧಿಸಲು ಸೂಚಿಸಿದರು. ತಂಬಾಕಿನ ಕಾನೂನು ಅರಿವು ಕೋಟ್ಪಾ-2003 ರ ಬಗ್ಗೆ ಸೆಕ್ಷನ್-4 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ.
ಈ ಕಾನೂನು ಉಲ್ಲಂಘಿಸಿದ ವ್ಯಕ್ಕಿಗೆ 200/-ದಂಡ ವಿಧಿಸಲಾಗುವುದು. ಸೆಕ್ಷನ್-5 ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇದ. ಸೆಕ್ಷನ್-6(ಎ)ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್-6(ಬಿ) ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಮೀಟರ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಶಿಕ್ಷಣ ಸಂಸ್ಥಗಳ 100 ಗಜದ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ತೇರವುಗೋಳಿಸುವುದು.
ದಂಡ ವಿಧಿಸಲು ಸೂಚಿಸಿದು ತಂಬಾಕಿನ ಪ್ಯಾಕೆಟಗಳ ಮೇಲೆ ತಂಬಾಕಿನ ಮಾರಾಟ ಮಾಡುತ್ತಿರುವ ಸೆಕ್ಷನ್-7 ಪ್ರಕಾರ ಸಿಗರೇಟ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಡ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿ ಕೋಟ್ಪಾ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸದ ಅಜಿದಾಬಿ ಮಲ್ಲಾಪೂರಿ ರವರು ವಹಿಸಿದರು
ಬೆಳಗಾವಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಪನ್ಮೂಲ ವ್ಯಕ್ತಿ ಸಲಹೆಗಾರರಾದ ಡಾ. ಶ್ವೇತಾ ಪಾಟೀಲ ಜಿಲ್ಲಾ ಮಾತನಾಡಿ ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ ಕುರಿತು ಪಿಪಿಟಿ ಮೂಲಕ ಉಪನ್ಯಾಸ ನೀಡಿದರು.
ಬೆಳಗಾವಿ ಜಿಲ್ಲಾ ಸಾಕ್ರಾಮಿಕ ರೋಗ ತಜÐರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಭೀಮಗೌಡ ಪಾಟೀಲ ಅವರು ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವ ಮತ್ತು ಶುದ್ದವಾದ ಕುಡಿಯುವ ನೀರಿನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗ್ರಾಮ ಪಮಚಾಯತಿ ಅಧಿಕಾರಿಗಳಿಗೆ ತಮ್ಮ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಮೂಲವನ್ನು ನೀಯಮಿತವಾಗಿ ಕ್ಲೋರಿನೇಷನ್ ಮಾಡಲು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸಂದೀಪ, ಪಂಚಾಯತ ಅಧಿಕಾರಿ ಯಾದ ಅಶೋಕ ಕಂಠಿ, ಎಮ್. ಎ. ಉಮರಾಣ , ಅಜಿದಾ ಮಲ್ಲಾಪೂರಿ, ಪರವಿನ ಪಕಾಲಿ, ಹುಸೇನೆಬೆಗ್ ಇನಾಮದಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಜಕಮತಿ ಉಸ್ಥಿತರಿದ್ದರು. ಜಿಲಾ ್ಲತಂಬಾಕು ನಿಯಂತ್ರಣ ಕೋಶ ಸಮಾಜ ಕಾರ್ಯಕರ್ತೆಯಾದ ಕುಮಾರಿ ಕವಿತಾ ರಾಜನ್ನವರ ವಂದಿಸಿದರು.///

ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

 

ಬೆಳಗಾವಿ, ಜ.05: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊಥಳಿ ಕುಪ್ಪಾನವಾಡಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 2023 , 2024 ಸಾಲಿನ 6ನೇ ವರ್ಗದ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಏಪ್ರಿಲ್ 29, 2023 ರಂದು ನಡೆಯುವ ಪ್ರವೇಶ ಪರೀಕ್ಷೆ ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಜನವರಿ 31, 2023 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.navodaya.gov. ಗೆ ಸಂಪರ್ಕಿಸಬಹುದು ಎಂದು ಅರವಿಂದ ಕುಪ್ಪಾನವಾಡಿ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///