Belagavi News In Kannada | News Belgaum

ಸಾರ್ವಜನಿಕ ಪ್ರಕಟಣೆ

ಫೆ. 4 ರಂದು ಬಹಿರಂಗ ಹರಾಜು

ಬೆಳಗಾವಿ, ಜ.06  : ಮಾನ್ಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಬೆಳಗಾವಿ ಇವರ ಕ್ವಾರ್ಟರ್ಸ್ ಆವರಣದಲ್ಲಿ ಕೆಎ-01-ಜಿ-3567(ಅಂಬಾಸಿಡರ) ಪೆಟ್ರೋಲ್ ಸರಕಾರಿ ವಾಹನವನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬಹಿರಂಗ ಹರಾಜು ಪ್ರಕ್ರಿಯೆ ಜರುಗಲಿದೆ.
ಹರಾಜಿನ ವಾಹನವನ್ನು ಯತಾಸ್ಥಿತಿಯಲ್ಲಿ ಸಾರ್ವಜನಿಕರಿಗೆ ವಿಲೇವಾರಿ ಮಾಡಲಾಗುವುದು. ಹರಾಜಿನ ಮೌಲ್ಯದ ಶೇ.50 ರಷ್ಟು ಹಣವನ್ನು ಸ್ಥಳದಲ್ಲಿ ಪಾವತಿ ಮಾಡತಕ್ಕದ್ದು, ಹರಾಜಿನಲ್ಲಿ ವಾದವಿವಾದಗಳಿಗೆ ಅವಕಾಶವಿಲ್ಲ. ಮಾನ್ಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಗಳು, ಬೆಳಗಾವಿರವರ ತೀರ್ಮಾನವೇ ಅಂತಿಮವಾಗಿರುತ್ತದೆ. ಮಾರಾಟದ ಹರಾಜನ್ನು ಅಂಗೀಕರಿಸುವ, ತಿರಸ್ಕರಿಸುವ, ಮುಂದೂಡುವ, ರದ್ದುಪಡಿಸುವ ಎಲ್ಲ ತೀರ್ಮಾನವು ಮಾನ್ಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಬೆಳಗಾವಿ ಈ ಕಚೇರಿಗೆ ಸಂಬಂಧಪಟ್ಟಿರುತ್ತದೆ.
ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ಸಾರ್ವಜನಿಕರು ಫೆಬ್ರುವರಿ 4 ರಂದು ಮುಂಜಾನೆ 11 ಗಂಟೆಗೆ ಮಾನ್ಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಬೆಳಗಾವಿ ಇವರ ಕ್ವಾರ್ಟರ್ಸ್ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಜರುಗಲಿದೆ ಎಂದು ಮಾನ್ಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.///

ಜ.8 ರಿಂದು ಸಂಗೊಳ್ಳಿ ರಾಯಣ್ಣ ಉತ್ಸವ ವೀರಜ್ಯೋತಿ ಯಾತ್ರೆ ಪ್ರಾರಂಭ

ಬೆಳಗಾವಿ, ಜ.06  : ಸಂಗೊಳ್ಳಿ ರಾಯಣ್ಣ ವೀರ ವೀರಜೋತಿ ಯಾತ್ರೆ ಜನವರಿ 8 ರಿಂದ 12 ಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ವೀರ ಜ್ಯೋತಿ ಯಾತ್ರೆಯೂ ಜನವರಿ 8 ರಂದು ಮಧ್ಯಾಹ್ನ 12 ಗಂಟೆಗೆ ನಂದಗಡದಿಂದ ಪ್ರಾರಂಭವಾಗಿ ಮಧ್ಯಾಹ್ನ 1:30ಕ್ಕೆ ಖಾನಾಪೂರ ಆಗಮನ ಮದ್ಯಾಹ್ನ 2:30ಕ್ಕೆ ಖಾನಾಪುರದಿಂದ ಬಿಳ್ಕೋಡುಗೆ ಸಂಜೆ 3:30ಕ್ಕೆ ಬೆಳಗಾವಿಗೆ ಆಗಮಿಸಿ ಸಂಜೆ 4:30ಕ್ಕೆ ಬೆಳಗಾವಿಯಿಂದ ವೀರ ಜ್ಯೋತಿಯನ್ನು ಕಾಕತಿಗೆ ಬಿಳ್ಕೋಡಲಾಗುವುದು.
ಅಂದು ಸಂಜೆ 5:30ಕ್ಕೆ ಕಾಕತಿಗೆ ವೀರ ಜ್ಯೋತಿ ಆಗಮಿಸಿ, ವಾಸ್ತವ್ಯ ಮಾಡುವುದು. ಜನವರಿ 9 ರಂದು ಮುಂಜಾನೆ 9 ಗಂಟೆಗೆ ಕಾಕತಿಯಿಂದ ವೀರಜ್ಯೋತಿ ಯಾತ್ರೆಯನ್ನು ಬಿಳ್ಕೋಡಲಾಗುವುದು. ಮುಂಜಾನೆ 10 ಗಂಟೆಗೆ ಹುಕ್ಕೇರಿಗೆ ಆಗಮನ ಮುಂಜಾನೆ 11 ಗಂಟೆಗೆ ಸಂಕೇಶ್ವರ ಅವರಿಗೆ ಆಗಮನ ಮಧ್ಯಾಹ್ನ 2 ಗಂಟೆಗೆ ಆಗಮನ ಸಂಜೆ 4 ಗೆ ಚಿಕ್ಕೋಡಿಗೆ ವೀರಜ್ಯೋತಿ ಆಗಮನ ಹಾಗೂ ವಾಸ್ತವ್ಯ ಮಾಡಲಾಗುವುದು.
ಜನವರಿ 10 ರಂದು ಮುಂಜಾನೆ 9 ಗಂಟೆಗೆ ಕಾಗವಾಡಕ್ಕೆ ಆಗಮಿಸಿವುದು. ನಂತರ ಮುಂಜಾನೆ 11 ಗಂಟೆಗೆ ಅಥಣಿಗೆ ಆಗಮಿಸಿವುದು. ಮಧ್ಯಾಹ್ನ 12:30ಕ್ಕೆ ರಾಯಬಾಗ ವೀರ ಜೊತೆ ಆಗಮಿಸಿವುದು. ಮಧ್ಯಾಹ್ನ 2:30ಕ್ಕೆ ಮೂಡಲಗಿ (ಕಂಕನವಾಡಿ ಗುರ್ಲಾಪುರ್ ಕ್ರಾಸ್ ಮಾರ್ಗವಾಗಿ ) ಆಗಮಿಸಿವುದು. ಸಂಜೆ 4 ಗಂಟೆಗೆ ಗೋಕಾಕಗೆ ವೀರಜ್ಯೋತಿ ಆಗಮಿಸಿವುದು. ಸಂಜೆ 6 ಗಂಟೆಗೆ ಯರಗಟ್ಟಿಗೆ ವೀರಜೊತೆ ಆಗಮಿಸಿ ವಾಸ್ತವ್ಯ ಮಾಡಲಾಗುವುದು.

 

ಜನವರಿ 11ರ ಮುಂಜಾನೆ 9 ಗಂಟೆಗೆ ರಾಮರ್ದುಗಕ್ಕೆ ಆಗಮಿಸಿವುದು. ಮಧ್ಯಾಹ್ನ 11 ಗಂಟೆಗೆ ಸವದತ್ತಿಗೆ ವೀರಜ್ಯೋತಿ ಆಗಮನ ಮಧ್ಯಾಹ್ನ 12 ಗಂಟೆಗೆ ಬೆಳವಡಿಗೆ ಆಗಮಿಸಿವುದು. ಮಧ್ಯಾಹ್ನ 2 ಗಂಟೆಗೆ ಬೈಲಹೊಂಗಲಗೆ ವೀರಜ್ಯೋತಿ ಆಗಮಿಸಿವುದು. ಸಂಜೆ 4 ಗಂಟೆಗೆ ಬೈಲಹೊಂಗಲದಿಂದ ವೀರಜ್ಯೋತಿಯನ್ನು ಬೀಳ್ಕೊಡಲಾಗುವುದು. ಸಂಜೆ 5 ಗಂಟೆಗೆ ಎಂಕೆ ಹುಬ್ಬಳ್ಳಿಗೆ ಆಗಮಿಸಿವುದು. ಸಂಜೆ 6 ಗಂಟೆಗೆ ಕಿತ್ತೂರಿಗೆ ವೀರಜ್ಯೋತಿ ಆಗಮಿಸಿ ವಾಸ್ತವ್ಯ ಮಾಡಲಾಗುವುದು.
ಜನವರಿ 12 ರಂದು ಮುಂಜಾನೆ 7 ಗಂಟೆಗೆ ಕಿತ್ತೂರಿನಿಂದ ವೀರಜ್ಯೋತಿ ಯಾತ್ರೆ ಬೀಳ್ಕೊಡಲಾಗುವುದು. ಮುಂಜಾನೆ 9 ಗಂಟೆಗೆ ಸಂಗೊಳ್ಳಿಗೆ ವೀರಜ್ಯೋತಿ ಆಗಮನವಾಗುವುದೆಂದು ಸಂಗೊಳ್ಳಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಜ.7 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಬೆಳಗಾವಿ, ಜ.06 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಹಿತಿಕೇಂದ್ರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಹಾಗೂ ಇತರೆ ಇಲಾಖೆಗಳ ಸಂಯುಕ್ತ ಆಯ್ರದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜನವರಿ 7 ರಂದು ಶನಿವಾರ ಬೆಳಗ್ಗೆ 10 30ಕ್ಕೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ ಅವರು ಉದ್ಘಾಟಿಸುವರು, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ರಾಚಪ್ಪ ತಾಳಿಕೋಟಿ ಅವರು ಅದ್ಯಕ್ಷತೆ ವಹಿಸುವರು. ಹೆಚ್ಚುವರಿ ಜಿಲ್ಲಾ ಗ್ರಾಹಕರ ಆಯೋಗ ಅದ್ಯಕ್ಷರಾದ ಸಂಜೀವ ವಿ ಕುಲಕರ್ಣಿ ಅವರು ಕರಪತ್ರ ಬಿಡುಗಡೆಗೊಳಿಸುವರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಾದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪಿ ಮುರಳೀಮೋಹನ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್ ವಿ ದರ್ಶನ, ಜಿಲ್ಲಾ ಗ್ರಾಹಕ ಆಯೋಗ ಸದಸ್ಯರಾದ ಸುನಂದಾ. ಎನ್ ಕಾದ್ರೊಳಿಮಠ, ಜಿಲ್ಲಾ ಗ್ರಾಹಕರ ಆಯೋಗ ಮಹಿಳಾ ಸದಸ್ಯರಾದ ನಯನಾ ಎ. ಕಾಮಟೆ ಅವರು ಭಾಗವಹಿಸುವರು.
ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘ ಅಧ್ಯಕ್ಷರು ಹಾಗೂ ನ್ಯಾಯಾವಾದಿಗಳಾದ ಎನ್ ಆರ್ ಲಾತೂರ ವಿಶೇಷ ಉಪನ್ಯಾಸ ಮಾಡುವರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದಶಕರಾದ ಬಿ ಎಮ್ ನಾಲತವಾಡ, ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸದಸ್ಯರಾದ ಪೂರ್ಣಿಮಾ ಪಟ್ಟಣಶೆಟ್ಟಿ ಉಪಸ್ಥಿತರಿರುತ್ತಾರೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಬಿ ಕಂಕನವಾಡಿ ಅವರು ತಿಳಿಸಿರುತ್ತಾರೆ.///