Belagavi News In Kannada | News Belgaum

ಲಕ್ಷ್ಮೀದೇವಿ ಹಾಗೂ ರೇಣುಕಾದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದ ಭಕ್ತಾದಿಗಳು

ಬೆಳಗಾವಿ : ಬೆಳಗಾವಿ ನಗರದ ರುಕ್ಮಿಣಿ ನಗರದಲ್ಲಿ ಇಂದು ಶ್ರೀ ಲಕ್ಷ್ಮಿ ದೇವಿ ಹಾಗೂ ರೇಣುಕಾದೇವಿ ಜಾತ್ರೆಯನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ಆಚರಣೆ ನಡೆಸಿ ಭಕ್ತಾದಿಗಳು ದರ್ಶನ ಪಡೆದರು.

ನಗರದ ಮಾಂತೇಶ್ ನಗರದಲ್ಲಿರುವ ರುಕ್ಮಿಣಿ ನಗರದಲ್ಲಿ ಲಕ್ಷ್ಮಿ ದೇವಿ ಹಾಗೂ ರೇಣುಕಾ ದೇವಿ ಮೂರ್ತಿ ಸುಮಾರು ವರ್ಷಗಳಿಂದ ಸ್ಥಾಪಿಸಿ ಮಂದಿರವನ್ನು ನಿರ್ಮಾನಿಸಲಾಗಿದೆ ಲಕ್ಷ್ಮೀದೇವಿ ಹಾಗೂ ರೇಣುಕಾದೇವಿ ಜೋಡಿ ಇರುವುದು ಈ ರುಕ್ಮಿಣಿ ನಗರದಲ್ಲಿರುವ ಮಂದಿರದಲ್ಲಿ ವಿಶೇಷವಾಗಿದೆ ಪ್ರತಿ ವರ್ಷದಂತೆ ದಿನಾಂಕ 05.01.2023ರಿಂದ 06.01.2023ರ ವರೆಗೆ ಎರಡು ದಿನಗಳ ಕಾಲ ಭಕ್ತಾದಿಗಳು ಜಾತ್ರೆಯ ನಿಮಿತ್ತ ಜಾತ್ರೆಯಲ್ಲಿ ಭಾಗವಹಿಸಿ ದರ್ಶನ ಪಡೆದರು ಪೌಷ ಸಾಕಂಬರಿ ಹುಣ್ಣಿಮೆ ಸಮಾಪ್ತ ದಿನ ಇಂದು ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರಯುಕ್ತ ಸುತ್ತಮುತ್ತಲಿನ ಸರ್ವ ಸಾರ್ವಜನಿಕರು ಅದ್ದೂರಿಯಾಗಿ ವಿಜೃಂಭಣೆಯಿಂದ ಲಕ್ಷ್ಮಿ ಹಾಗೂ ರೇಣುಕಾದೇವಿ ಜಾತ್ರೆಯನ್ನು ನಡೆಸಿದರು ಭಕ್ತಾದಿಗಳು ಲಕ್ಷ್ಮಿ ರೇಣುಕಾ ದರ್ಶನ ಪಡೆದು ಪ್ರಸಾದ ಪಡೆದುಕೊಂಡರು ಹಾಗೂ ಈ ಪ್ರಸಾದ ವ್ಯವಸ್ಥೆಯನ್ನು ಮಂದಿರದ ಕಮಿಟಿಯ ಅಧ್ಯಕ್ಷರಾದ ನಂದಕುಮಾರ್ ಹಾಗೂ ಪಾರ್ವತಿ ಕಮತಿ ಇವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಜಾತ್ರೆಯ ಕಾರ್ಯಕ್ರಮವನ್ನು ನಡೆಸಿದರು ಜಾತ್ರೆಯಲಿ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು