Belagavi News In Kannada | News Belgaum

ಶಾಸಕ ಬಸನಗೌಡ ಯತ್ನಾಳ್ ಅವರ ಕಾಲು ಹಿಡಿದು ಭೇಟಿಗೆ ಸಮಯ ಕೇಳಿರುವುದು ಅಚ್ಚರಿ

ವಿಜಯಪುರ: ಸಂಸದ ರಮೇಶ್ ಜಿಗಜಿಣಗಿ ಸ್ವಂತ ಅಣ್ಣ ಸಿದ್ರಾಮ ಜಿಗಜಿಣಗಿ ಅವರು ನಡುರಸ್ತೆಯಲ್ಲೆ ಶಾಸಕ ಬಸನಗೌಡ ಯತ್ನಾಳ್ ಅವರ ಕಾಲು ಹಿಡಿದು ಭೇಟಿಗೆ ಸಮಯ ಕೇಳಿರುವುದು ಅಚ್ಚರಿ ಮೂಡಿಸಿದೆ.
ವಿಜಯಪುರದ ವಾಟರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದ್ದು, ಕಾಲು ಮುಗಿದು ಭೇಟಿಗೆ ಸಮಯ ಕೇಳಿದ ಸಿದ್ರಾಮ ಜಿಗಜಿಣಗಿ ಅವರಿಗೆ ಸಂಜೆ 5:30 ಕ್ಕೆ ಭೇಟಿಗೆ ಕಛೇರಿಗೆ ಬರುವಂತೆ ಯತ್ನಾಳ್ ಸೂಚಿಸಿದ್ದಾರೆ.  ಇತ್ತ ತನ್ನ ಹಿಂಬಾಲಕರ ಜೊತೆ ಮಾತನಾಡುತ್ತಾ, ಇವರ ಅಣ್ಣ ಇವರದ್ದೇ 5 ಎಕರೆ ಜಮೀನು ಕಬಳಿಸಿದ್ದು, ಇವರು ಸಂಸದ ರಮೇಶ ಜಿಗಜಿಣಗಿ ಅಣ್ಣ ಅಂತಾ ಹೇಳಿದರು.